ADVERTISEMENT

ಜಾಹ್ನವಿಗೆ ಮರಣೋತ್ತರವಾಗಿ ಸ್ನಾತ್ತಕೋತ್ತರ ಪದವಿ: ವಿ.ವಿ ಕುಲಪತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2023, 15:34 IST
Last Updated 16 ಸೆಪ್ಟೆಂಬರ್ 2023, 15:34 IST
<div class="paragraphs"><p>ಜಾಹ್ನವಿ ಕುಂದಲ</p></div>

ಜಾಹ್ನವಿ ಕುಂದಲ

   

ಸಿಯಾಟಲ್‌ (ಪಿಟಿಐ): ಅಮೆರಿಕದ ಸಿಯಾಟಲ್‌ನಲ್ಲಿ ವೇಗವಾಗಿ ಸಾಗುತ್ತಿದ್ದ ಪೊಲೀಸ್‌ ವಾಹನ ಹರಿದು ಮೃತಪಟ್ಟಿದ್ದ ಭಾರತದ ವಿದ್ಯಾರ್ಥಿನಿ ಜಾಹ್ನವಿ ಕಂದುಲ(23) ಅವರಿಗೆ ಮರಣೋತ್ತರವಾಗಿ ಸ್ನಾತ್ತಕೋತ್ತರ ಪದವಿ ನೀಡಲಾಗುವುದು ಎಂದು ನಾರ್ಥ್‌ಈಸ್ಟ್ರನ್‌ ವಿಶ್ವವಿದ್ಯಾಲಯದ ಕುಲಪತಿ ಕೆನ್ನೆಥ್‌ ಡಬ್ಲ್ಯು. ಹೆಂಡರ್‌ಸನ್‌ ತಿಳಿಸಿದ್ದಾರೆ.

‘ಜಾಹ್ನವಿ ನಿಧನವು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ನೋವು ತರಿಸಿದೆ. ಅವರ ಕುಟುಂಬಕ್ಕೆ ಪದವಿಯನ್ನು ಹಸ್ತಾಂತರಿಸಲಾಗುವುದು’ ಎಂದು ಕುಲಪತಿ ಹೇಳಿದ್ದಾರೆ. 

ADVERTISEMENT

ವಿಶ್ವವಿದ್ಯಾಲಯದ ಸಿಯಾಟಲ್‌ ಕ್ಯಾಂಪಸ್‌ನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಜಾಹ್ನವಿ ಅವರು ಬರುವ ಡಿಸೆಂಬರ್‌ನಲ್ಲಿ ಪದವಿ ಪಡೆಯಬೇಕಿತ್ತು.

ಗಂಟೆಗೆ 119 ಕಿಲೋ ಮೀಟರ್‌ ವೇಗದಲ್ಲಿ ಸಾಗುತ್ತಿದ್ದ ಪೊಲೀಸ್‌ ವಾಹನವೊಂದು ನಡೆದುಕೊಂಡು ಹೋಗುತ್ತಿದ್ದ ಅವರ ಮೇಲೆ ಹರಿದ ಪರಿಣಾಮ ಜನವರಿ 23ರಂದು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.