ADVERTISEMENT

ಸಂಯಮ ಕಾಯ್ದುಕೊಳ್ಳಿ ಇಮ್ರಾನ್‌ಗೆ ಟ್ರಂಪ್‌ ಸಲಹೆ

ಪಿಟಿಐ
Published 20 ಆಗಸ್ಟ್ 2019, 19:31 IST
Last Updated 20 ಆಗಸ್ಟ್ 2019, 19:31 IST
   

ವಾಷಿಂಗ್ಟನ್‌: ಕಾಶ್ಮೀರದ ವಿಚಾರದಲ್ಲಿ ಹೇಳಿಕೆ ನೀಡುವಾಗ ಸಂಯಮದಿಂದಿರಿ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸೂಚಿಸಿದ್ದಾರೆ. ಸಂಯಮ ಕಾಯ್ದು ಕೊಳ್ಳದೇ ಇದ್ದರೆಭಾರತ–ಪಾಕಿಸ್ತಾನ ನಡುವೆ ಉಂಟಾಗಿರುವ ವಿಷಮ ಸ್ಥಿತಿಯು ಇನ್ನಷ್ಟು ತೀವ್ರವಾಗಬಹುದು ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಟ್ರಂಪ್‌ ಜತೆಗೆ ಮೋದಿ ಅವರು ಸೋಮವಾರ 30 ನಿಮಿಷ ಮಾತುಕತೆ ನಡೆಸಿದ್ದರು. ಬಳಿಕ, ಟ್ರಂಪ್‌ ಅವರು ಇಮ್ರಾನ್‌ಗೆ ಕರೆ ಮಾಡಿ ಈ ಸೂಚನೆ ನೀಡಿದ್ದಾರೆ.

ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಬಳಿಕ ಇಮ್ರಾನ್‌ ಅವರು ಭಾರತದ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಭಾರತವು ಮತಾಂಧ ಮತ್ತು ಸರ್ವಾಧಿಕಾರಿಯಾಗಿದೆ. ಇದು ಪಾಕಿಸ್ತಾನಕ್ಕೆ ಮಾತ್ರವಲ್ಲದೆ, ಭಾರತದಲ್ಲಿರುವ ಅಲ್ಪಸಂಖ್ಯಾತರಿಗೂ ಅಪಾಯಕಾರಿ ಎಂದು ಭಾನುವಾರ ಹೇಳಿದ್ದರು. ಭಾರತದಲ್ಲಿರುವ ಅಣ್ವಸ್ತ್ರಗಳ ಸುರಕ್ಷತೆ ಬಗ್ಗೆ ಜಗತ್ತು ಗಮನ ಹರಿಸಬೇಕು. ಯಾಕೆಂದರೆ ಇದು ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದೂ ಹೇಳಿದ್ದರು.

ADVERTISEMENT

lಜಮ್ಮು–ಕಾಶ್ಮೀರದ ವಿಶೇಷ ಸ್ಥಾನ ರದ್ದತಿ ವಿಚಾರವನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಪಾಕಿಸ್ತಾನ ಹೇಳಿದೆ.

lರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರು ಶ್ರೀನಗರಕ್ಕೆ ಹೋಗಲು ಮಂಗಳವಾರ ಮತ್ತೆ ಯತ್ನಿಸಿದ್ದಾರೆ. ಆದರೆ, ಅವರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ವಾಪಸ್‌ ಕಳುಹಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.