ADVERTISEMENT

ಜಮ್ಮು ಮತ್ತು ಕಾಶ್ಮೀರ: ನೂತನ ಸಚಿವರಿಗೆ ಖಾತೆ ಹಂಚಿದ ಲೆಫ್ಟಿನೆಂಟ್ ಗವರ್ನರ್‌

ಪಿಟಿಐ
Published 18 ಅಕ್ಟೋಬರ್ 2024, 5:34 IST
Last Updated 18 ಅಕ್ಟೋಬರ್ 2024, 5:34 IST
<div class="paragraphs"><p>ಒಮರ್ ಅಬ್ದುಲ್ಲಾ ಹಾಗೂ ಎಲ್‌ಜಿ ಮನೋಜ್ ಶರ್ಮಾ</p></div>

ಒಮರ್ ಅಬ್ದುಲ್ಲಾ ಹಾಗೂ ಎಲ್‌ಜಿ ಮನೋಜ್ ಶರ್ಮಾ

   

– ಪಿಟಿಐ

ಶ್ರೀನಗರ: ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಶುಕ್ರವಾರ ಖಾತೆ ಹಂಚಿಕೆ ಮಾಡಿದ್ದಾರೆ.

ADVERTISEMENT

ಮುಖ್ಯಮಂತ್ರಿಗಳ ಸಲಹೆ ಮೇರೆಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಆದೇಶ ಹೊರಡಿಸಿದ್ದಾರೆ.

ಉಪಮುಖ್ಯಮಂತ್ರಿ ಸುರಿಂದರ್ ಕುಮಾರ್ ಚೌದರಿ ಅವರಿಗೆ ಲೋಕೋಪಯೋಗಿ, ಕೈಗಾರಿಕೆ ಹಾಗೂ ವಾಣಿಜ್ಯ, ಕಾರ್ಮಿಕ, ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಹಂಚಿಕೆ ಮಾಡಲಾಗಿದೆ.

ಸಂಪುಟದಲ್ಲಿರುವ ಏಕೈಕ ಮಹಿಳಾ ಸಚಿವೆ ಸಕೀನಾ ಮಸೂದ್ ಅವರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಇಲಾಖೆ ಖಾತೆ ಹಂಚಿಕೆಯಾಗಿವೆ. ಅವರು ಈ ಹಿಂದಿನ ಒಮರ್ ಅವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು.

ಜಾವೇದ್ ರಣಾ ಅವರಿಗೆ ಜಲಶಕ್ತಿ, ಅರಣ್ಯ, ಪರಿಸರ ವಿಜ್ಞಾನ, ಮತ್ತು ಬುಡಕಟ್ಟು ವ್ಯವಹಾರಗಳ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ.

ಜಾವಿದ್ ಅಹ್ಮದ್ ದಾರ್ ಅವರಿಗೆ ಕೃಷಿ ಉತ್ಪಾದನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌, ಸಹಕಾರ ಹಾಗೂ ಚುನಾವಣೆ ಖಾತೆಗಳನ್ನು ಹಂಚಲಾಗಿದೆ.

ಸತೀಶ್ ಶರ್ಮಾ ಅವರಿಗೆ ಆಹಾರ ಹಾಗೂ ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ, ಸಾರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ, ಯುವಜನ ಹಾಗೂ ಕ್ರೀಡೆ, ಕೃಷಿ ಮತ್ತು ಗ್ರಾಮೀಣ ಕೈಗಾರಿಕೆ, ತರಬೇತಿ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಯಾವುದೇ ಹಂಚಿಕೆಯಾಗದ ಖಾತೆಗಳು ಇದ್ದರೆ ಅದು ಮುಖ್ಯಮಂತ್ರಿಯವರ ಬಳಿ ಇರಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.