ADVERTISEMENT

ರನ್‌ವೇನಲ್ಲಿ ಹೊತ್ತಿ ಉರಿದ ಜಪಾನ್ ವಿಮಾನ: ಎಲ್ಲ ಪ್ರಯಾಣಿಕರು ಸುರಕ್ಷಿತ

360ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಜಪಾನ್ ಏರ್‌ಲೈನ್ಸ್‌ ವಿಮಾನ ಟೊಕಿಯೊ ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ಅಪಘಾತ

ಏಜೆನ್ಸೀಸ್
Published 2 ಜನವರಿ 2024, 9:58 IST
Last Updated 2 ಜನವರಿ 2024, 9:58 IST
<div class="paragraphs"><p>ಜಪಾನ್ ಏರ್‌ಲೈನ್ಸ್‌ ವಿಮಾನ</p></div>

ಜಪಾನ್ ಏರ್‌ಲೈನ್ಸ್‌ ವಿಮಾನ

   

ಟೊಕಿಯೊ: ಜಪಾನ್ ರಾಜಧಾನಿ ಟೊಕಿಯೊದ ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇನಲ್ಲಿ ಜಪಾನ್ ಏರ್‌ಲೈನ್‌ ವಿಮಾನವೊಂದು ಇನ್ನೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿದೆ.

ಇದರಿಂದ 360ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಜಪಾನ್ ಏರ್‌ಲೈನ್ಸ್‌ನ ಏರ್‌ಬಸ್ ಎ350 ವಿಮಾನ ರನ್‌ವೇನಲ್ಲಿಯೇ ಹೊತ್ತಿ ಉರಿದಿದೆ.

ADVERTISEMENT

ಜಪಾನ್ ಕೋಸ್ಟ್ ಗಾರ್ಡ್ ವಿಮಾನಕ್ಕೆ ಪ್ರಯಾಣಿಕರಿದ್ದ ಜಪಾನ್ ಏರ್‌ಲೈನ್ಸ್‌ ವಿಮಾನ ಡಿಕ್ಕಿ ಹೊಡೆದಿದೆ ಎಂದು ವರದಿಗಳು ತಿಳಿಸಿವೆ.

ವಿಮಾನ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ದೃಶ್ಯಗಳು ಇಂಟರ್‌ನೆಟ್‌ನಲ್ಲಿ ಹರಿದಾಡಿದ್ದು, ವಿಮಾನ ನಿಲ್ದಾಣದ ಅಗ್ನಿಶಾಮಕ ಪಡೆ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. ಸಾವು–ನೋವುಗಳ ವಿವರ ಇನ್ನೂ ತಿಳಿದು ಬಂದಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.

ಪ್ರಯಾಣಿಕರಿದ್ದ ಈ ವಿಮಾನ Shin-Chitose ದಿಂದ ಟೊಕಿಯೊಕ್ಕೆ ಬರುತ್ತಿತ್ತು. ವಿಮಾನದಲ್ಲಿ ಸಿಬ್ಬಂದಿ ಸೇರಿ 379 ಜನ ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಎಪಿ ಸುದ್ದಿಸಂಸ್ಥೆಯ ಇತ್ತೀಚಿನ ವರದಿ ತಿಳಿಸಿದೆ.

ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಜಪಾನ್‌ನ ಭಾರಿ ಜನದಟ್ಟಣೆಯ ವಿಮಾನ ನಿಲ್ದಾಣವಾಗಿದೆ. ಹೊಸ ವರ್ಷದ ಪ್ರಯುಕ್ತ ಪ್ರಯಾಣಿಕರ ಸಂಖ್ಯೆಯೂ ಹೆಚ್ಚು ಇತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.