ಟೋಕಿಯೊ: ಎರಡನೇ ವಿಶ್ವಯುದ್ಧದ ನಂತರ ಇದೇ ಮೊದಲ ಬಾರಿಗೆ ಯುದ್ಧವಿಮಾನ ನೌಕೆಯನ್ನು ಜಪಾನ್ ಅಭಿವೃದ್ಧಿ ಪಡಿಸಲಿದೆ. ಅಲ್ಲದೆ, ಹನ್ನೆರಡಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಅನುಮೋದನೆಯನ್ನೂ ಪಡೆದಿದೆ.
ಮಿಲಿಟರಿ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವ ಚೀನಾಕ್ಕೆ ಪ್ರತಿಯಾಗಿ ತನ್ನ ಸೇನಾ ಸಾಮರ್ಥ್ಯವನ್ನು ವೃದ್ಧಿ ಮಾಡಿಕೊಳ್ಳಲು ಜಪಾನ್ ಮುಂದಾಗಿದೆ.
ಈ ಕಾರ್ಯಕ್ಕೆ ಮುಂದಿನ ಐದು ವರ್ಷಗಳಲ್ಲಿ ₹1,719.23 ಕೋಟಿಯನ್ನು (244 ಬಿಲಿಯನ್ ಡಾಲರ್) ತೆಗೆದಿರಿಸಲು ಶಿಂಜೊ ಅಬೆ ಸರ್ಕಾರ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.