ಟೊಕಿಯೊ: ಜಪಾನ್‌ನ ಫುಕುಶಿಮಾದಲ್ಲಿ ಶುಕ್ರವಾರದಂದು ಭೂಕಂಪ ಸಂಭವಿಸಿದ್ದು, ಸುನಾಮಿ ಅಪಾಯ ಎದುರಾಗಿಲ್ಲ ಎಂದು ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.0ರಷ್ಟು ದಾಖಲಾಗಿದೆ. ಸ್ಥಳೀಯ ಸಮಯ ಬೆಳಗ್ಗೆ 8.58ರ ಸುಮಾರಿಗೆ ಭೂಕಂಪನ ಸಂಭವಿಸಿದೆ.
ಭೂಕಂಪದ ಕೇಂದ್ರ ಬಿಂದು ಉತ್ತರಕ್ಕೆ 37.7 ಡಿಗ್ರಿ ಅಕ್ಷಾಂಶದಲ್ಲಿ ಮತ್ತು ಪೂರ್ವಕ್ಕೆ 141.8 ಡಿಗ್ರಿ ರೇಖಾಂಶದಲ್ಲಿ ಮತ್ತು 40 ಕಿ.ಮೀ. ಆಳದಲ್ಲಿ ದಾಖಲಾಗಿದೆ.
ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ. ಅಲ್ಲದೆ ಇದುವರೆಗೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಈ ತಿಂಗಳ ಆರಂಭದಲ್ಲಿ ಜಪಾನ್‌ನ ಈಶಾನ್ಯ ಕರಾವಳಿ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಫೆಸಿಫಿಕ್ ಸಾಗರದ ಭೂಕಂಪ ವಲಯದಲ್ಲಿ (ರಿಂಗ್ ಆಫ್ ಫೈರ್) ಸ್ಥಿತಗೊಂಡಿರುವ ಜಪಾನ್‌ನಲ್ಲಿ ಪದೇ ಪದೇ ಭೂಕಂಪನದ ಅನುಭವವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.