ಟೋಕಿಯೊ: ರಾಜಧಾನಿ ಟೋಕಿಯೊದಿಂದ ದಕ್ಷಿಣಕ್ಕೆ ದೂರದ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಅಪ್ಪಳಿಸುವ ಕುರಿತು ಜಪಾನ್ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.
ಕಡಲಾಚೆಯ ದೂರದ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ ಈವರೆಗೆ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಮಂಗಳವಾರ ಮುಂಜಾನೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಬೆನ್ನಲ್ಲೇ ಇಜು ದ್ವೀಪದ ತೀರ ಪ್ರದೇಶದಲ್ಲಿ ಒಂದು ಮೀಟರ್ ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುವ ಕುರಿತು ಜಪಾನ್ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.
ಟೋಕಿಯೊದಿಂದ ದಕ್ಷಿಣಕ್ಕೆ 300 ಕಿ.ಮೀ. ದೂರದಲ್ಲಿರುವ ಹಚಿಜೋ ದ್ವೀಪದಿಂದ ದಕ್ಷಿಣಕ್ಕೆ 190 ಕಿ.ಮೀ. ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಅದು ತಿಳಿಸಿದೆ.
ಪೆಸಿಫಿಕ್ ಸಾಗರದ ಭೂಕಂಪ ವಲಯದಲ್ಲಿ (ರಿಂಗ್ ಆಫ್ ಫೈರ್) ಸ್ಥಿತಗೊಂಡಿರುವ ಜಪಾನ್‌ನಲ್ಲಿ ಪದೇ ಪದೇ ಭೂಕಂಪನದ ಅನುಭವವುಂಟಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.