ಟೋಕಿಯೊ: ಪೂರ್ವನಿರ್ಧಾರದಂತೆ ಜಪಾನ್‌ನ ಪ್ರಧಾನಿ ಫುಮಿಯೊ ಕಿಷಿದಾ ಮತ್ತು ಸಂಪುಟ ಸದಸ್ಯರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಈ ಮೂಲಕ ಉತ್ತರಾಧಿಕಾರಿ ಶಿಗೆರು ಇಶಿಬಾ ಅವರು ಅಧಿಕಾರಕ್ಕೇರಲು ದಾರಿ ಮಾಡಿಕೊಟ್ಟರು. ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ನಾಯಕರಾಗಿ ಇಶಿಬಾ ಶುಕ್ರವಾರ ಆಯ್ಕೆ ಮಾಡಲಾಗಿತ್ತು.
ಇಶಿಬಾ ಅವರು ಸಂಸತ್ತಿನ ಮತದಾನದಲ್ಲಿ ಔಪಚಾರಿಕವಾಗಿ ಆಯ್ಕೆಯಾದ ಬಳಿಕ ಹೊಸ ಸಂಪುಟ ರಚನೆ ಮಾಡಲಿದ್ದಾರೆ. ಶಿಬಾ ಅವರು 1986ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಚುನಾಯಿತರಾಗಿದ್ದರು. ನಂತರ ರಕ್ಷಣೆ ಸೇರಿದಂತೆ ವಿವಿಧ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.