ADVERTISEMENT

ಶಿಂಜೊ ಅಬೆ ಹತ್ಯೆ: ಭದ್ರತಾ ನ್ಯೂನತೆ ಒಪ್ಪಿಕೊಂಡ ಜಪಾನ್ ಪೊಲೀಸರು

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 15:04 IST
Last Updated 9 ಜುಲೈ 2022, 15:04 IST
ಶಿಂಜೊ ಅಬೆ
ಶಿಂಜೊ ಅಬೆ   

ಟೋಕಿಯೊ: ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಒದಗಿಸಿದ್ದ ಭದ್ರತೆಯಲ್ಲಿ ಸಮಸ್ಯೆಗಳು ಇದ್ದವು ಎಂಬುದನ್ನು ಜಪಾನ್ ಪೊಲೀಸರು ಶನಿವಾರ ಒಪ್ಪಿಕೊಂಡಿದ್ದಾರೆ.

ಗುಂಡು ಹಾರಿಸಿದ ದುಷ್ಕರ್ಮಿ ತೆತ್ಸುಯ ಯಮಾಗಾಮಿನಿಂದ ವಿವರಗಳನ್ನು ಪೊಲೀಸರು ಇನ್ನೂ ಕಲೆ ಹಾಕುತ್ತಿದ್ದಾರೆ.

ಅಬೆ ಅವರಿಗೆ ನೀಡಿದ್ದ ಭದ್ರತೆಯಲ್ಲಿ ಸಮಸ್ಯೆಗಳಿರುವುದನ್ನು ನಿರಾಕರಿಸಲಾಗದು ಎಂದು ನಾರಾ ಪ್ರದೇಶದ ಪೊಲೀಸ್‌ ಮುಖ್ಯಸ್ಥಟೊಮೊಕಿ ಒನಿಜುಕಾ ಒಪ್ಪಿಕೊಂಡಿದ್ದಾರೆ.

ADVERTISEMENT

ಕಪ್ಪು ಬಟ್ಟೆ ಧರಿಸಿ ಹಿರಿಯ ರಾಜಕಾರಣಿಗಳು ಅಬೆ ಅವರ ನಿವಾಸಕ್ಕೆ ಆಗಮಿಸಿ ಸಂತಾಪ ಸೂಚಿಸಿದರು.ಮೇಲ್ಮನೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಶನಿವಾರವೂ ಪ್ರಚಾರ ಮುಂದುವರಿಸಿದರು.

‘ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಚುನಾವಣೆ ಸಮಯದಲ್ಲಿ ಭಾಷಣ ಹತ್ತಿಕ್ಕಲು ಹಿಂಸೆಗೆ ಅವಕಾಶ ನೀಡಬಾರದು‘ ಎಂದು ಜಪಾನ್ ಪ್ರಧಾನ ಮಂತ್ರಿ ಫುಮಿಯೊ ಕಿಶಿಡಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.