ADVERTISEMENT

ರಷ್ಯಾಕ್ಕೆ ಸಹಾಯ: ಬೆಂಗಳೂರು ಮೂಲದ ಟೆಕ್‌ ಕಂಪನಿಗೆ ಜಪಾನ್ ನಿರ್ಬಂಧ

ಪಿಟಿಐ
Published 24 ಜೂನ್ 2024, 3:36 IST
Last Updated 24 ಜೂನ್ 2024, 3:36 IST
<div class="paragraphs"><p>ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ</p></div>

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ

   

ನವದೆಹಲಿ: ಆರ್ಥಿಕ ಮತ್ತು ವ್ಯಾಪಾರ ದಿಗ್ಭಂಧನದ ನಡುವೆ ರಷ್ಯಾಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಹಲವು ದೇಶಗಳ ಕನಿಷ್ಠ 10 ಕಂಪನಿಗಳ ಮೇಲೆ ಜಪಾನ್ ನಿರ್ಬಂಧ ವಿಧಿಸಿದೆ. ಅವುಗಳಲ್ಲಿ ಬೆಂಗಳೂರು ಮೂಲದ ಭಾರತೀಯ ತಂತ್ರಜ್ಞಾನ ಕಂಪನಿಯೂ ಸೇರಿದೆ.

ಆಸ್ತಿ ತಡೆಹಿಡಿಯುವುದು ಮತ್ತು ರಫ್ತು ನಿಷೇಧ ಸೇರಿದಂತೆ ಕಂಪನಿಗಳ ವಿರುದ್ಧದ ಕ್ರಮಗಳ ಬಗ್ಗೆ ಜಪಾನ್‌ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ. ಜಪಾನ್ ಸರ್ಕಾರದಿಂದ ನಿರ್ಬಂಧ ಎದುರಿಸಲಿರುವ ಕಂಪನಿಗಳ ಪಟ್ಟಿಯಲ್ಲಿ ಚೀನಾ, ಕಝಾಕಿಸ್ತಾನ, ಉಜ್ಬೇಕಿಸ್ತಾನ ಮತ್ತು ಯುಎಇ ಮೂಲದ ಕಂಪನಿಗಳು ಸೇರಿವೆ.

ADVERTISEMENT

ಉಕ್ರೇನ್ ಮೇಲೆ ಯುದ್ಧ ಸಾರಿದ್ದಕ್ಕಾಗಿ ರಷ್ಯಾದ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಅದರ ಮಿತ್ರರಾಷ್ಟ್ರಗಳು ಆರ್ಥಿಕ ಮತ್ತು ವ್ಯಾಪಾರ ದಿಗ್ಭಂಧನ ಹೇರಿದ್ದವು. ವಿದೇಶಿ ವಿನಿಮಯ ಮತ್ತು ವಿದೇಶಿ ವ್ಯಾಪಾರ ಕಾಯ್ದೆಯಡಿ ಜಪಾನ್ ರಷ್ಯಾದ ಮೇಲೆ ದಿಗ್ಭಂಧನ ವಿಧಿಸಿತ್ತು.

ಕಳೆದ ವಾರ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಆರ್ಥಿಕ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ರಷ್ಯಾಕ್ಕೆ ಸಹಾಯ ಮಾಡುತ್ತಿರುವ ಕಂಪನಿಗಳು ಮತ್ತು ಸಂಸ್ಥೆಗಳ ವಿರುದ್ಧ ಜಪಾನ್‌ ಕಠಿಣ ಕ್ರಮಕೈಗೊಂಡಿರುವುದಾಗಿ ತಿಳಿಸಿದ್ದರು.

ಜಪಾನ್ ಈಗಾಗಲೇ ರಷ್ಯಾದ ಹಲವಾರು ಕಂಪನಿಗಳ ಮೇಲೆ ದಂಡನಾತ್ಮಕ ಕ್ರಮ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.