ಟೋಕಿಯೊ: ಜಪಾನ್‌ನಲ್ಲಿ ಎಲ್‌ಜಿಬಿಟಿಕ್ಯೂ ಸಮುದಾಯದವರು (ಸಲಿಂಗಿಗಳು, ದ್ವಿಲಿಂಗಿಗಳು, ಲಿಂಗ ಪರಿವರ್ತಿತರು) ತಮ್ಮ ಹಕ್ಕುಗಳಲ್ಲಿ ಮುನ್ನಡೆ ಸಾಧಿಸಿರುವುದಕ್ಕೆ ಇಲ್ಲಿ ಭಾನುವಾರ ‘ಹೆಮ್ಮೆಯ ಪರೇಡ್’ ನಡೆಸಿದ್ದಾರೆ.
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿರುವ ಇತರ ಮುಂದುವರಿದ ರಾಷ್ಟ್ರಗಳ ಸಾಲಿಗೆ ಜಪಾನ್ ಕೂಡ ಸೇರಬೇಕು ಎಂದೂ ಈ ಸಮುದಾಯದವರು ಆಗ್ರಹಿಸಿದ್ದಾರೆ.
ಪರೇಡ್‌ನಲ್ಲಿ 10 ಸಾವಿರ ಮಂದಿ ಪಾಲ್ಗೊಂಡಿದ್ದರು. ಜಪಾನ್‌ನಲ್ಲಿ ಮುಂದಿನ ತಿಂಗಳು ಜಿ7 ಶೃಂಗಸಭೆ ನಡೆಯಲಿದ್ದು, ಸಲಿಂಗ ವಿವಾಹವನ್ನು ಅಂಗೀಕರಿಸದ ಏಕೈಕ ಸದಸ್ಯ ರಾಷ್ಟ್ರ ಇದಾಗಿದೆ.
ದೇಶದ ಪ್ರಮುಖ ಉದ್ಯಮಿಗಳು ಹಾಗೂ ಕಂಪನಿಗಳು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂದು ಫ್ಯೂಮಿಯೊ ಕಿಷಿದಾ ಅವರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಸಲಿಂಗ ವಿವಾಹ ವಿಚಾರದಲ್ಲಿ ನಮ್ಮ ದೇಶವು ಇತರ ಜಿ7 ದೇಶಗಳಿಂದ ಹಿಂದುಳಿದಿದೆ ಎಂಬುದನ್ನು ನಾವು ಮನಗಂಡಿದ್ದೇವೆ. ಆದರೆ ಮುಂದೆ ಬದಲಾವಣೆಯ ಭರವಸೆಯನ್ನು ಹೊಂದಿದ್ದೇವೆ’ ಎಂದು ಪರೇಡ್‌ನಲ್ಲಿ ಪಾಲ್ಗೊಂಡವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.