ADVERTISEMENT

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆಗೆ ಅಂತಿಮ ವಿದಾಯ

ಏಜೆನ್ಸೀಸ್
Published 12 ಜುಲೈ 2022, 11:29 IST
Last Updated 12 ಜುಲೈ 2022, 11:29 IST
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಪಾರ್ಥಿವ ಶರೀರ ಹೊತ್ತು ಹೊರಟ ವಾಹನ
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಪಾರ್ಥಿವ ಶರೀರ ಹೊತ್ತು ಹೊರಟ ವಾಹನ    

ಟೋಕಿಯೊ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಮಂಗಳವಾರ ಅಂತಿಮ ವಿದಾಯ ಸಲ್ಲಿಸಲಾಯಿತು.

ಝೊಜೊಜಿ ದೇವಸ್ಥಾನದ ಬಳಿ ನಡೆದ ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ನಾಗರಿಕರು ಭಾಗವಹಿಸಿದ್ದರು. ಅವರೆಲ್ಲಾ ಕೈಬೀಸಿ ತಮ್ಮ ನೆಚ್ಚಿನ ನಾಯಕನಿಗೆ ವಿದಾಯ ಹೇಳಿದರು. ‘ಸೂರ್ಯ ಮುಳುಗುತ್ತಿದ್ದಾನೆ’ ಎಂಬ ಘೋಷಣೆಯನ್ನೂ ಕೂಗಿದರು. ಆಪ್ತರು, ಶಿಂಜೊ ಅವರ ಭಾವಚಿತ್ರದ ಎದುರು ಹೂಗುಚ್ಛ ಇಟ್ಟು ಗದ್ಗದಿತರಾದರು. ದೇವಸ್ಥಾನದ ಎದುರು ಸೇರಿದ್ದ ಜನರು ಪಾರ್ಥಿವ ಶರೀರ ಹೊತ್ತಿದ್ದ ವಾಹನದ ಚಿತ್ರವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದುಕೊಂಡರು.

ಜಪಾನ್‌ನ ಪ್ರಧಾನಿ ಫುಮಿಯೊ ಕಿಶಿಡಾ, ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಮುಖಂಡರು, ಶಿಂಜೊ ಪತ್ನಿ ಅಕೀ ಅಬೆ ಹಾಗೂ ಕುಟುಂಬ ಸದಸ್ಯರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಅಂತ್ಯಕ್ರಿಯೆಗೂ ಮುನ್ನ ಶಿಂಜೊ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಕೈಗೊಳ್ಳಲಾಗಿತ್ತು. ಪಕ್ಷದ ಕೇಂದ್ರ ಕಚೇರಿ, ಪ್ರಧಾನಿ ಅವರ ನಿವಾಸಕ್ಕೆ ಈ ಯಾತ್ರೆ ಸಾಗಿತ್ತು.

ಚುನಾವಣಾ ಪ್ರಚಾರ ನಡೆಸುತ್ತಿದ್ದಅಬೆ (67) ಅವರನ್ನು ಹೋದ ಶುಕ್ರವಾರ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.