ಟೋಕಿಯೊ: ಜಪಾನಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಶಿಂಜೊ ಅಬೆ ಅವರು ಪಾತ್ರರಾಗಿದ್ದಾರೆ.ಶಿಂಜೊ ಅಬೆ ಅವರು ಪ್ರಧಾನಿಯಾಗಿ ಸೋಮವಾರ2,799 ದಿನಗಳನ್ನು ಪೂರೈಸಿದ್ದಾರೆ.
ಶಿಂಜೊ ಅಬೆ ಅವರ ದೊಡ್ಡಪ್ಪ 1964 ರಿಂದ 1972 ವರೆಗಿನ ಅವಧಿಯಲ್ಲಿ 2798 ದಿನಗಳಷ್ಟು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿದಿರುವ ಶಿಂಜೊ ಅವರು 2012 ರಿಂದ ಈವರೆಗೆ ಅಧಿಕಾರದಲ್ಲಿದ್ದಾರೆ. ಸೋಮವಾರ ಪ್ರಧಾನಿಯಾಗಿ2,799 ದಿನವನ್ನು ಪೂರೈಸಿದ್ದಾರೆ.
ಶಿಂಬೊ ಅಬೆ ಅವರು ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಮುಂದಿನ ತಿಂಗಳು ಶಿಂಜೊ ಅಬೆ ಅವರು ತಮ್ಮ 66ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.