ಟೋಕಿಯೊ: ಜಪಾನ್ ಕಳುಹಿಸಿದ್ದ ಲ್ಯಾಂಡರ್ ಪೂರ್ವ ನಿಗದಿತ ಜಾಗದಲ್ಲಿಯೇ ಚಂದ್ರನನ್ನು ಸ್ಪರ್ಶಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಅದು ಕೊನೆ ಹಂತದಲ್ಲಿ ತಲೆಕೆಳಗಾಗಿದೆ ಎಂದು ಜಪಾನ್ ಬಾಹ್ಯಾಕಾಶ ಸಂಸ್ಥೆ ಗುರುವಾರ ತಿಳಿಸಿದೆ. ಚಂದ್ರನ ಮೇಲ್ಮೈ ಪ್ರವೇಶಿಸುವ ತನ್ನ ಮೊದಲ ಯೋಜನೆಯಡಿ ಲ್ಯಾಂಡರ್ ಅನ್ನು ಅದು ಕಳುಹಿಸಿತ್ತು.
ಚಂದ್ರನ ಅಧ್ಯಯನಕ್ಕಾಗಿ ಜಪಾನ್ ಕಳುಹಿಸಿರುವ ‘ಸ್ಲಿಮ್’ ಲ್ಯಾಂಡರ್ ಚಂದ್ರನನ್ನು ಶನಿವಾರ ಮುಂಜಾನೆ ಸ್ಪರ್ಶಿಸಿತು. ಆ ಮೂಲಕ ಚಂದ್ರನನ್ನು ತಲುಪಿದ ಐದನೇ ದೇಶ ಎಂಬ ಕೀರ್ತಿಗೆ ಅದು ಭಾಜನವಾಯಿತು.
ಲ್ಯಾಂಡರ್ ಇಳಿಯುವ ಸಂದರ್ಭದಲ್ಲಿ ಸೌರ ಬ್ಯಾಟರಿಯಲ್ಲಿ ಕಂಡು ಬಂದ ತೊಂದರೆಯಿಂದಾಗಿ, ಅದು ನಿಗದಿತ ವಲಯದಲ್ಲಿಯೇ ಇಳಿದಿದೆಯೇ ಎಂಬುದನ್ನು ಖಚಿತವಾಗಿ ಲೆಕ್ಕ ಹಾಕವುದು ಆರಂಭದಲ್ಲಿ ಕಷ್ಟವಾಯಿತು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.