ವಾಷಿಂಗ್ಟನ್: ಅಮೆರಿಕದ ವ್ಯಾಪಾರ ನೀತಿ ಮತ್ತು ಸಮಾಲೋಚನೆಯ ಸಲಹಾ ಸಮಿತಿಗೆ ಭಾರತೀಯ ಮೂಲದ ಇಬ್ಬರನ್ನು ಅಧ್ಯಕ್ಷ ಜೋ ಬೈಡೆನ್ ಅವರು ನೇಮಕ ಮಾಡಿದ್ದಾರೆ.
ಫ್ಲೆಕ್ಸ್ ಕಂಪನಿಯ ಸಿಇಒ ರೇವತಿ ಅದ್ವೈತಿ ಹಾಗೂ ನ್ಯಾಚುರಲ್ ರಿಸೋರ್ಸ್ ಡಿಫೆನ್ಸ್ ಕೌನ್ಸಿಲ್‌ನ ಸಿಇಒ ಮನೀಶ್ ಬಾಪ್ನಾ ಅವರನ್ನು ನೇಮಕ ಮಾಡಲಾಗಿದೆ.
ಈ ಸಲಹಾ ಸಮಿತಿಗೆ 14 ಮಂದಿಯನ್ನು ನೇಮಕ ಮಾಡುವ ತನ್ನ ನಿರ್ಧಾರವನ್ನು ಶುಕ್ರವಾರ ಅವರು ಘೋಷಣೆ ಮಾಡಿದ್ದಾರೆ. 14 ಮಂದಿಯ ಪೈಕಿ ಈ ಇಬ್ಬರು ಸ್ಥಾನ ಪಡೆದಿದ್ದಾರೆ
ಈ ಸಮಿತಿಯು ಅಮೆರಿಕದ ವ್ಯಾಪಾರ ನೀತಿಯ ಅಭಿವೃದ್ಧಿ, ಅನುಷ್ಠಾನ ಮತ್ತು ಆಡಳಿತದ ವಿಷಯಗಳ ಕುರಿತು ಸಲಹೆ ನೀಡಲಿದೆ.
ವ್ಯಾಪಾರ ಒಪ್ಪಂದಕ್ಕೂ ಮುನ್ನ ಸಂಧಾನ ಉದ್ದೇಶಗಳು, ಒಪ್ಪಂದಿಂದ ಆಗುವ ಪರಿಣಾಮಗಳು ಹಾಗೂ ಒಪ್ಪಂದ ಬಳಿಕ ಎದುರಾಗುವ ಅಭಿವೃದ್ಧಿ, ಅನುಷ್ಠಾನ ಹಾಗೂ ಆಡಳಿತಾತ್ಮಕ ವಿಚಾರಗಳ ಬಗ್ಗೆ ಸಲಹೆ ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.