ವಾಷಿಂಗ್ಟನ್: ಉಕ್ರೇನ್ ಮೇಲೆ ದಾಳಿಯನ್ನು ಮುಂದುವರಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು 'ಯುದ್ಧಾಪರಾಧಿ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕರೆದಿದ್ದಾರೆ.
ಶ್ವೇತಭವನದಲ್ಲಿ ಬುಧವಾರ ಮಾಧ್ಯಮದ ಪ್ರಶ್ನೆಗೆ ಉತ್ತರಿಸುವ ವೇಳೆ ಬೈಡನ್, 'ನನ್ನ ಪ್ರಕಾರ ಆತ(ಪುಟಿನ್) ಯುದ್ಧಾಪರಾಧಿ' ಎಂದಿದ್ದಾರೆ.
ಇದಾದ ಬಳಿಕ ತಕ್ಷಣ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಪಿಸಾಕಿ ಅವರು, 'ಅಧ್ಯಕ್ಷರ ಹೇಳಿಕೆಯು ವೈಯಕ್ತಿಕ' ಎಂದಿದ್ದಾರೆ.
'ಪುಟಿನ್ ಬಗೆಗಿನ ಅಧ್ಯಕ್ಷರ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಭಾವಿಸುತ್ತೇನೆ. ಅದು ಅವರ ಹೃದಯದ ಮಾತಾಗಿದೆ. ಬೇರೆ ರಾಷ್ಟ್ರದ ಮೇಲೆ ಅತಿಕ್ರಮಣ ಮಾಡುವ ಮೂಲಕ ಕ್ರೂರ ಸರ್ವಾಧಿಕಾರಿ ಧೋರಣೆಯನ್ನು ಪುಟಿನ್ ಪ್ರದರ್ಶಿಸಿದ್ದಾರೆ. ಈ ನಡೆಯ ಕುರಿತು ಅಧ್ಯಕ್ಷರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ' ಎಂದು ಜೆನ್ ಪಿಸಾಕಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.