ವಾಷಿಂಗ್ಟನ್: ಟಿವಿ ಪತ್ರಕರ್ತರೊಬ್ಬರಿಗೆ ಅಮೆರಿಕ ಅಧ್ಯಕ್ಷ ಜೋಬೈಡನ್ ಅವರು ಅಶ್ಲೀಲವಾಗಿ ನಿಂದಿಸಿರುವ ಘಟನೆ ನಡೆದಿದೆ. ಈ ಘಟನೆ ಮೈಕ್ರೊಫೋನ್‌ನಲ್ಲಿ ಸೆರೆಯಾಗಿದೆ.
ವೈಟ್‌ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯುವಾಗ ಜೋಬೈಡನ್ ಮಾತು ಮುಗಿಸಿದ ಮೇಲೆ ಕೆಲ ಪತ್ರಕರ್ತರು ತೆರಳಲು ಮುಂದಾದರು. ಆದರೆ, ಅಲ್ಲಿದ್ದ ಫಾಕ್ಸ್ ನ್ಯೂಸ್ ವರದಿಗಾರ ‘ಹಣದುಬ್ಬರ ಹೆಚ್ಚಾಗಿದೆ. ಇದು ರಾಜಕೀಯ ಹೊಣೆಗಾರಿಕೆಯಾ? ಎಂದು ಅಧ್ಯಕ್ಷರನ್ನು ಪ್ರಶ್ನಿಸಿದ್ದಾರೆ.
ಇದರಿಂದ ಕುಪಿತಗೊಂಡ ಜೋ ಬೈಡನ್ ಕ್ಷೀಣ ಸ್ವರದಲ್ಲಿ ಹೌದು ಹೆಚ್ಚಿನ ಹಣದುಬ್ಬರ ಹೆಚ್ಚಿನ ಸ್ವತ್ತು ನಮಗೆ ಎನ್ನುತ್ತಾ ಪ್ರಶ್ನೆ ಕೇಳಿದ್ದ ಪತ್ರಕರ್ತನನ್ನುದ್ದೇಶಿಸಿ ಅವಾಚ್ಯವಾಗಿನಿಂದಿಸಿದ್ದಾರೆ. ಇದು ಅಲ್ಲಿದ್ದವರಿಗೆ ಕೇಳಿಲ್ಲ. ನಂತರ ಫಾಕ್ಸ್ ನ್ಯೂಸ್ ಈ ಬಗ್ಗೆ ವರದಿ ಮಾಡಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೇ ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ನೆಟ್ಟಿಗರು ಜಂಟಲ್‌ಮನ್ ಜೋಬೈಡನ್ ಬಾಯಲ್ಲಿ ಇದೇಂತಾ ಮಾತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಹಣದುಬ್ಬರದ ಬಗ್ಗೆ ಅಧ್ಯಕ್ಷರನ್ನು ಪ್ರಶ್ನೆ ಕೇಳಿದರೆ ಅವರಿಗೆ ಏನನಿಸುತ್ತದೆ ಎಂಬುದಕ್ಕೆ ಅವರ ಮಾತುಗಳೇ ಸಾಕ್ಷಿ ಎಂದು ಫಾಕ್ಸ್ ನ್ಯೂಸ್ ಹೇಳಿದೆ.
ಘಟನೆಗೆ ಸಂಬಂಧಿಸಿದ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಸಹಜವಾಗಿ ಜಂಟಲ್‌ಮನ್ ಎಂದು ಕರೆಯಿಸಿಕೊಳ್ಳುವ ಜೋಬೈಡನ್ ಅವರ ಬಾಯಲ್ಲಿ ಇಂತಹ ಮಾತು ಏಕೆ ಬಂತು ಎಂದು ಪ್ರಶ್ನಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.