ADVERTISEMENT

'ಮಿಲಿಟರಿ ವಲಯ'ವಾಗಿ ಪರಿವರ್ತನೆಯಾದ ಅಮೆರಿಕ ಕ್ಯಾಪಿಟಲ್

ಏಜೆನ್ಸೀಸ್
Published 18 ಜನವರಿ 2021, 1:20 IST
Last Updated 18 ಜನವರಿ 2021, 1:20 IST
ಅಮೆರಿಕ ಕ್ಯಾಪಿಟಲ್ ಕಟ್ಟಡಕ್ಕೆ ಗರಿಷ್ಠ ಭದ್ರತೆ
ಅಮೆರಿಕ ಕ್ಯಾಪಿಟಲ್ ಕಟ್ಟಡಕ್ಕೆ ಗರಿಷ್ಠ ಭದ್ರತೆ    

ವಾಷಿಂಗ್ಟನ್: ಜನವರಿ 20ರಂದು ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಅಮೆರಿಕ ಕ್ಯಾಪಿಟಲ್ ಹಾಗೂ ಸುತ್ತು ಮುತ್ತಲಿನ ಪ್ರದೇಶಗಳನ್ನು 'ಮಿಲಿಟರಿ ವಲಯವನ್ನಾಗಿ' ಪರಿವರ್ತಿಸಲಾಗಿದೆ.

ಇತ್ತೀಚೆಗಷ್ಟೇ ಅಮೆರಿಕ ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿರುವ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಕಟ್ಟಡಕ್ಕೆ ದಾಳಿ ನಡೆಸಿ ಹಿಂಸಾಚಾರ ನಡೆಸಿದ್ದರು. ಇದು ಜಾಗತಿಕ ಮಟ್ಟದಲ್ಲಿ ಅಮೆರಿಕ ವರ್ಚಸ್ಸಿಗೆ ಕಪ್ಪು ಮಸಿ ಬಳಿದಿತ್ತು.

ಅಮೆರಿಕ ಆಂತರಿಕ ಭದ್ರತೆಯನ್ನೇ ಅಲುಗಾಡಿಸಿತ್ತು. ಈಗ ಕ್ಯಾಪಿಟಲ್ ಗಲಭೆಯ ಹಿನ್ನೆಲೆಯಲ್ಲಿ ಗರಿಷ್ಠ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.

ADVERTISEMENT

ಶಸ್ತ್ರಸಜ್ಜಿತ 25,000 ನ್ಯಾಷನಲ್ ಗಾರ್ಡ್ ಪಡೆಗಳನ್ನು ನಿಯೋಜಿಸಲಾಗುವುದು. ಕ್ಯಾಪಿಟಲ್ ಸುತ್ತುಮುತ್ತಲಿನ ಪ್ರತಿಯೊಂದು ಪ್ರದೇಶದ ಮೇಲೂ ಸೂಕ್ಷ್ಮ ನಿಗಾ ವಹಿಸಲಾಗುವುದು.

ಅಮೆರಿಕದಲ್ಲಿ ಐತಿಹಾಸಿಕ 'ಸಿವಿಲ್ ವಾರ್' ಬಳಿಕ ಇದೇ ಮೊದಲ ಬಾರಿಗೆ ಭಾರಿ ಭದ್ರತೆ ಏರ್ಪಡಿಸಲಾಗುತ್ತಿದೆ.

ಅಮೆರಿಕ ಇಂತಹ ಪರಿಸ್ಥಿತಿಯನ್ನು ಎಂದಿಗೂ ಎದುರಿಸಿರಲಿಲ್ಲ. ಅಮೆರಿಕ ಮೇಲೆ ನಡೆದ 9/11 ದಾಳಿ ವೇಳೆಯಲ್ಲೂ ಇಂತಹ ಪರಿಸ್ಥಿತಿ ಎದುರಾಗಿಲ್ಲ. ಟ್ರಂಪ್ ಬೆಂಬಲಿಗರಿಂದ ಬೃಹತ್ ರ‍್ಯಾಲಿ ಭೀತಿಯ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ನಲ್ಲಿ ಗರಿಷ್ಠ ಭದ್ರತೆಯನ್ನು ಏರ್ಪಡಿಸಲಾಗುತ್ತಿದೆ.

ಏತನ್ಮಧ್ಯೆ ಪ್ರತಿಭಟನಾಕಾರರು ಕೆಲವು ನಗರಗಳಲ್ಲಿ ಒಗ್ಗೂಡಲಾರಂಭಿಸಿದ್ದಾರೆ ಎಂಬುದು ವರದಿಯಾಗಿದೆ. ಓಹಿಯೋ ಸ್ಟೇಟ್ ಹೌಸ್ ಹಾಗೂ ದಕ್ಷಿಣ ಕರೊಲಿನಾದಲ್ಲಿ ಗನ್‌ಗಳನ್ನು ಹೊತ್ತುಕೊಂಡು ಕೆಲವರು ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.