ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ ಶಾಂತಿಯುತವಾಗಿ ನಡೆಯುವ ವಿಶ್ವಾಸವಿಲ್ಲ: ಜೋ ಬೈಡನ್‌

ಏಜೆನ್ಸೀಸ್
Published 5 ಅಕ್ಟೋಬರ್ 2024, 6:01 IST
Last Updated 5 ಅಕ್ಟೋಬರ್ 2024, 6:01 IST
<div class="paragraphs"><p>ಶ್ವೇತಭವನದಲ್ಲಿ ಜೋ ಬೈಡನ್ ಪತ್ರಿಕಾಗೋಷ್ಠಿ</p></div>

ಶ್ವೇತಭವನದಲ್ಲಿ ಜೋ ಬೈಡನ್ ಪತ್ರಿಕಾಗೋಷ್ಠಿ

   

–ರಾಯಿಟರ್ಸ್ ಚಿತ್ರ

ವಾಷಿಂಗ್ಟನ್‌: ನವೆಂಬರ್‌ 5ರ ಅಧ್ಯಕ್ಷೀಯ ಚುನಾವಣೆ ಶಾಂತಿಯುತವಾಗಿ ನಡೆಯುವುದು ಅನುಮಾನ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ADVERTISEMENT

2020ರ ಅಧ್ಯಕ್ಷೀಯ ಚುನಾವಣೆ ಸೋಲನ್ನು ಡೊನಾಲ್ಡ್ ಟ್ರಂಪ್ ಅವರು ಈಗಲೂ ಒಪ್ಪಿಕೊಳ್ಳುವುದಿಲ್ಲ ಎನ್ನುವುದನ್ನು ಉಲ್ಲೇಖಿಸಿ ಅವರು ಹೀಗೆ ನುಡಿದಿದ್ದಾರೆ.

ಚುನಾವಣೆ ಪ್ರಚಾರದ ವೇಳೆ ಬಳಕೆಯಾಗುತ್ತಿರುವ ಆಕ್ರಮಣಕಾರಿ ಭಾಷೆಯ ಬಗ್ಗೆ ಸಂಸದರು ಹಾಗೂ ವಿಶ್ಲೇಷಕರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಬೈಡನ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

‘ಮುಂದಿನ ಚುನಾವಣೆಯು ಮುಕ್ತ ಹಾಗೂ ನ್ಯಾಯಸಮ್ಮತವಾಗಿರಲಿದೆ ಎನ್ನುವ ವಿಶ್ವಾಸ ಇದೆ. ಆದರೆ ಶಾಂತಿಯುವಾಗಿರುತ್ತದೆಯೋ ಎನ್ನುವುದರ ಬಗ್ಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

‘ಟ್ರಂಪ್ ಅವರು ನೀಡಿದ ಹೇಳಿಕೆಗಳು ಹಾಗೂ ಈ ಹಿಂದಿನ ಚುನಾವಣಾ ಫಲಿತಾಂಶದ ಬಗ್ಗೆ ಅವರ ಮಾತುಗಳು ಅಪಾಯಕಾರಿ’ ಎಂದು ಬೈಡನ್ ಹೇಳಿದ್ದಾರೆ.

‌ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಶ್ವೇತಭವನದ ಪತ್ರಿಕಾಗೋಷ್ಠಿ ಕಚೇರಿಯಲ್ಲಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.