ADVERTISEMENT

ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ತಿಳಿಸಲು ಅಮೆರಿಕವನ್ನುದ್ದೇಶಿಸಿ ಬೈಡನ್ ಭಾಷಣ

ರಾಯಿಟರ್ಸ್
Published 24 ಜುಲೈ 2024, 6:36 IST
Last Updated 24 ಜುಲೈ 2024, 6:36 IST
<div class="paragraphs"><p>ಜೋ ಬೈಡನ್</p></div>

ಜೋ ಬೈಡನ್

   

–ರಾಯಿಟರ್ಸ್ ಚಿತ್ರ

ವಾಷಿಂಗ್ಟನ್‌: ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿರುವುದರ ಬಗ್ಗೆ ತಿಳಿಸಲು ಬುಧವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ADVERTISEMENT

ಕೋವಿಡ್‌ಗೆ ತುತ್ತಾಗಿ ಸುಮಾರು ಒಂದು ವಾರ ಡೆಲಾವೆರ್‌ನ ತಮ್ಮ ನಿವಾಸದಲ್ಲಿ ಕ್ವಾರಂಟೈನ್‌ನಲ್ಲಿದ್ದ ಜೋ ಬೈಡನ್ ಅವರು, ಮಂಗಳವಾರ ಶ್ವೇತಭವನಕ್ಕೆ ಆಗಮಿಸಿದರು.

‘ನಾಳೆ ಸಂಜೆ 8 ಗಂಟೆಗೆ (ಭಾರತದಲ್ಲಿ ಗುರುವಾರ ಮುಂಜಾನೆ) ಓವಲ್ ಕಚೇರಿಯಿಂದ ಮುಂದಿನ ನಡೆ ಬಗ್ಗೆ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತೇನೆ. ಆ ಮೂಲಕ ಅಮೆರಿಕ ಜನರ ಮೇಲಿರುವ ನನ್ನ ಹೊಣೆಗಾರಿಕೆಯನ್ನು ಮುಗಿಸುತ್ತೇನೆ’ ಎಂದು ಬೈಡನ್ ಮಂಗಳವಾರ ಹೇಳಿದ್ದಾರೆ.

‘ಇಂದು ಮಧ್ಯಾಹ್ನ ನಾನು ಓವಲ್ ಕಚೇರಿಗೆ ಆಗಮಿಸಿ, ರಾಷ್ಟ್ರೀಯ ಭದ್ರತಾ ತಂಡದ ಜೊತೆಗೆ ನನ್ನ ದೈನಂದಿನ ಗುಪ್ತಚರ ಮಾಹಿತಿ ಪಡೆಯಲು ಸಭೆ ನಡೆಸಿದೆ. ನಿಮ್ಮ (ಅಮೆರಿಕದ) ಕಮಾಂಡರ್ ಇನ್ ಚೀಫ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದು ನನಗೆ ಗೌರವದ ಸಂಗತಿ’ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶ್ವೇತಭವನಕ್ಕೆ ಆಗಮಿಸುತ್ತಿರುವ ಚಿತ್ರವನ್ನೂ ಬೈಡನ್ ಅವರು ಹಂಚಿಕೊಂಡಿದ್ದು, ‘ಶ್ವೇತಭವನಕ್ಕೆ ಮತ್ತೆ ಬಂದಿರುವುದು ಅದ್ಭುತ ಅನುಭವ’ ಎಂದು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ, ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದ ಬೈಡನ್‌, ಭಾರತ ಮೂಲದ ಕಮಲಾ ಹ್ಯಾರಿಸ್‌ರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅನುಮೋದಿಸಿದ್ದರು.

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಬೈಡನ್‌, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಅಟ್ಲಾಂಟದಲ್ಲಿ ನಡೆದ ಸಂವಾದದಲ್ಲಿ ನೀರಸ ಪ್ರದರ್ಶನ ತೋರಿದ್ದರು. ಬಳಿಕ ಬೈಡನ್ ಹಿಂದೆ ಸರಿಯಬೇಕು ಎನ್ನುವ ಒತ್ತಡಗಳು ತೀವ್ರವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.