ADVERTISEMENT

ವಿಶೇಷ ನ್ಯಾಯಾಲಯ ಸ್ಥಾಪನೆ ಅಸಂವಿಧಾನಿಕ: ಹೈಕೋರ್ಟ್‌

ಪಿಟಿಐ
Published 13 ಜನವರಿ 2020, 19:14 IST
Last Updated 13 ಜನವರಿ 2020, 19:14 IST

ಲಾಹೋರ್‌ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ವಿರುದ್ಧದ ಪ್ರಕರಣದ ತನಿಖೆಗೆ ವಿಶೇಷ ವಿಚಾರಣಾ ನ್ಯಾಯಾಲಯ ಸ್ಥಾಪಿಸಿದ್ದು ‘ಅಸಂವಿಧಾನಿಕ’ ಎಂದು ಲಾಹೋರ್ ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ಸೈಯದ್‌ ಮುಜಾಹರ್‌ ಅಲಿ ಅಕ್ಬರ್‌ ನಖ್ವಿ, ಮೊಹಮ್ಮದ್‌ ಅಮೀರ್‌ ಭಾಟಿ ಮತ್ತು ಚೌಧರಿ ಮಸೂದ್‌ ಜಹಂಗೀರ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಮುಷರಫ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

ಮುಷರಫ್ ಅವರು ತಮ್ಮ ಅರ್ಜಿಯಲ್ಲಿ, ವಿಶೇಷ ವಿಚಾರಣಾ ನ್ಯಾಯಾಲಯ ಸ್ಥಾಪನೆ ಕಾನೂನುಬಾಹಿರ, ನ್ಯಾಯಾಲಯದ ವ್ಯಾಪ್ತಿ ಮೀರಿದ ಮತ್ತು ಅಸಂವಿಧಾನಿಕ ಎಂದು ಪರಿಗಣಿಸುವಂತೆ ಕೋರಿದ್ದರು.ಅರ್ಜಿಯ ಕುರಿತು ಅಂತಿಮ ತೀರ್ಪುತೆಗೆದುಕೊಳ್ಳುವವರೆಗೂ ವಿಶೇಷ ನ್ಯಾಯಾಲಯದ ತೀರ್ಪನ್ನು ಅಮಾನತಿನಲ್ಲಿಡುವಂತೆಮನವಿ ಮಾಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.