ಬುಡಾಪೆಸ್ಟ್, ಹಂಗರಿ: ಅಂತರರಾಷ್ಟ್ರೀಯ ಜೂಡೊ ಫೆಡರೇಷನ್‌ನ ಗೌರವ ಅಧ್ಯಕ್ಷ ಸ್ಥಾನದಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಮಾನತು ಮಾಡಲಾಗಿದೆ. ಉಕ್ರೇನ್ ಮೇಲೆ ಅತಿಕ್ರಮಣ ಮಾಡಿರುವುದನ್ನು ವಿರೋಧಿಸಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಫೆಡರೇಷನ್‌ನ ಆಡಳಿತ ಭಾನುವಾರ ತಿಳಿಸಿದೆ.
ನೆಲ, ಜಲ ಮತ್ತು ವಾಯುಮಾರ್ಗದ ಮೂಲಕ ರಷ್ಯಾವು ಉಕ್ರೇನ್ ಮೇಲೆ ಗುರುವಾರ ದಿಢೀರ್ ಆಕ್ರಮಣ ನಡೆಸಿತ್ತು. ಹೀಗಾಗಿ ಉಕ್ರೇನ್‌ನಲ್ಲಿ ಈಗ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಜೂಡೊದಲ್ಲಿ ಬ್ಲ್ಯಾಕ್‌ಬೆಲ್ಟ್ ಹೊಂದಿರುವ 69 ವರ್ಷದ ಪುಟಿನ್ ‘ಜೂಡೊ: ಇತಿಹಾಸ,ಸಿದ್ಧಾಂತ ಮತ್ತು ಅಭ್ಯಾಸ’ ಎಂಬ ಪುಸ್ತಕ ರಚಿಸಿದ್ದಾರೆ.
ರಷ್ಯಾದ ಕಜಾನ್‌ನಲ್ಲಿ ಮೇ 20ರಿಂದ 22ರ ವರೆಗೆ ನಡೆಯಬೇಕಾಗಿದ್ದ ಜೂಡೊ ಗ್ರ್ಯಾನ್‌ಸ್ಲಾಂ ಟೂರ್ನಿಯನ್ನು ರದ್ದುಗೊಳಿಸಿರುವುದಾಗಿ ಜೂಡೊ ಫೆಡರೇಷನ್ ಶುಕ್ರವಾರ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.