ಮಿನ್ನೆಪೊಲಿಸ್: ಕಪ್ಪುವರ್ಣೀಯ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಪೊಲೀಸ್ ಅಧಿಕಾರಿಯ ಡೆರೆಕ್ ಚೌವಿನ್ ಅವರ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠಕ್ಕೆ ಅಗತ್ಯ ಇದ್ದ ಇಬ್ಬರು ನ್ಯಾಯಾಧೀಶರ ನಿಯೋಜನೆ ಪೂರ್ಣಗೊಂಡಿದೆ.
ಹೀಗಾಗಿ, ಭಾರಿ ಜನಾಕ್ರೋಶಕ್ಕೆ ಕಾರಣವಾಗಿದ್ದ ಫ್ಲಾಯ್ಡ್ ಹತ್ಯೆ ಪ್ರಕರಣದ ವಿಚಾರಣೆ ಪೂರ್ಣಗೊಂಡು ಶೀಘ್ರವೇ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ.
ಈ ನ್ಯಾಯಪೀಠದ ಒಟ್ಟು ನ್ಯಾಯಾಧೀಶರ ಸಂಖ್ಯೆ 12. ಈ ಪೈಕಿ ಆರು ಜನ ಶ್ವೇತವರ್ಣೀಯರು, ನಾಲ್ಕು ಜನ ಕಪ್ಪುವರ್ಣೀಯರು ಇದ್ದಾರೆ. ಉಳಿದೆರಡು ಸ್ಥಾನಕ್ಕೆ, ಬೇರೆ ಜನಾಂಗಕ್ಕೆ ಸೇರಿದ ಇಬ್ಬರು ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ.ಈ ನ್ಯಾಯಪೀಠ ಗುರುವಾರ ವಿಚಾರಣೆ ಆರಂಭಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.