ADVERTISEMENT

ಈಗ ದೇಶಕ್ಕೆ ಕಮಲಾ ಅವರ ಅಗತ್ಯವಿದೆ: ಪತಿ ಡೌಗ್ಲಾಸ್ ಎಮ್ಹಾಫ್‌

ಪಿಟಿಐ
Published 21 ಆಗಸ್ಟ್ 2024, 5:43 IST
Last Updated 21 ಆಗಸ್ಟ್ 2024, 5:43 IST
<div class="paragraphs"><p>ಕಮಲಾ ಹ್ಯಾರಿಸ್‌ ಮತ್ತು ಪತಿ&nbsp;ಡೌಗ್ಲಾಸ್&nbsp;ಎಮ್ಹಾಫ್‌</p></div>

ಕಮಲಾ ಹ್ಯಾರಿಸ್‌ ಮತ್ತು ಪತಿ ಡೌಗ್ಲಾಸ್ ಎಮ್ಹಾಫ್‌

   

ರಾಯಿಟರ್ಸ್‌ ಚಿತ್ರ

ಚಿಕಾಗೊ: ಕಮಲಾ ಹ್ಯಾರಿಸ್‌ ಶ್ರೇಷ್ಠ ಅಧ್ಯಕ್ಷೆಯಾಗುತ್ತಾರೆ, ಜತೆಗೆ ಇಡೀ ಅಮೆರಿಕ ಹೆಮ್ಮೆಪಡುವಂತೆ ಮಾಡುತ್ತಾರೆ ಎಂದು ಕಮಲಾ ಪತಿ ಡೌಗ್ಲಾಸ್ ಎಮ್ಹಾಫ್‌ ಹೇಳಿದ್ದಾರೆ. 

ADVERTISEMENT

ಮಂಗಳವಾರ ರಾತ್ರಿ ಡೆಮಾಕ್ರೆಟಿಕ್‌ ನ್ಯಾಷನಲ್‌ ಕನ್ವೆಷನ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಡೌಗ್ಲಾಸ್, ‘ ಕುಟುಂಬಕ್ಕಾಗಿ ಕಮಲಾ ಎಲ್ಲವನ್ನೂ ಮಾಡಿದ್ದಾರೆ, ಈಗ ದೇಶಕ್ಕೆ ಅವರ ಅಗತ್ಯವಿದೆ, ನಮಗೆ ತಿಳಿದಿರುವ ಕಮಲಾ ನಿಮ್ಮೆದುರು ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕತ್ವವನ್ನು ನಿಭಾಯಿಸಲು ಅವರು ಸಿದ್ಧರಿದ್ದಾರೆ’ ಎಂದರು.

‘ಕಮಲಾ ಉತ್ತಮ ಅಧ್ಯಕ್ಷೆಯಾಗಲಿದ್ದಾರೆ. ದೇಶವೇ ಹೆಮ್ಮೆಪಡುವಂತಹ ನಾಯಕತ್ವವಹಿಸಲಿದ್ದಾರೆ ಎನ್ನುವ ಭರವಸೆಯಿದೆ. ದೇಶಕ್ಕಿರುವ ಬೆದರಿಕೆಯ ವಿರುದ್ಧ ಧ್ವನಿಯೆತ್ತಲಿದ್ದಾರೆ. ಜನರು ಉತ್ತಮವಾಗಿರುವುದನ್ನು ಕಾಣಲು ಅವರು ಬಯಸುತ್ತಾರೆ. ಆದರೆ ಅನ್ಯಾಯವಾಗಿ ನಡೆಸಿಕೊಂಡಾಗ ದ್ವೇಷಿಸುತ್ತಾರೆ. ಅವರ ಸಹಾನುಭೂತಿಯೇ ಅವರ ಶಕ್ತಿ’ ಎಂದು ಪತ್ನಿ ಕಮಲಾ ಬಗ್ಗೆ ಬಣ್ಣಿಸಿದರು. 

ಅಮೆರಿಕದಲ್ಲಿ ನ.5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್‌, ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸ್ಪರ್ಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.