ಕೊಲಂಬೊ: ಭಾನುವಾರ ಬೆಳಗ್ಗೆಈಸ್ಟರ್ ಹಬ್ಬದಾಚರಣೆ ವೇಳೆ ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆಎಂದು ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.
ಸಾವಿಗೀಡಾದ ಮಹಿಳೆ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿ ಪಿ.ಎಸ್. ರಸೀನಾ (58) ಎಂದು ಗುರುತಿಸಲಾಗಿದೆ.
ಪತಿ ಜತೆ ಕೊಲಂಬೊಗೆ ಪ್ರವಾಸ ಹೋಗಿದ್ದ ರಸೀನಾ ಶಾಂಗ್ರಿಲಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.ಹೋಟೆಲ್‌ನಿಂದ ಚೆಕ್‍ಔಟ್ ಮಾಡಿ ಹೊರಗೆ ಬರುವ ಹೊತ್ತಿಗೆ ಬಾಂಬ್ ಸ್ಫೋಟ ಸಂಭವಿಸಿದೆ.
ಮೃತದೇಹ ರಸೀನಾಳದ್ದೇ ಎಂದು ಆಕೆಯ ಸಹೋದರ ಪತ್ತೆ ಹಚ್ಚಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರದ ಬಗ್ಗೆ ಅಥವಾ ಮೃತದೇಹವನ್ನುಊರಿಗೆ ಕರೆ ತರುವುದರ ಬಗ್ಗೆ ಸದ್ಯ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಶ್ರೀಲಂಕಾದ ಏಳು ಪ್ರದೇಶಗಳಲ್ಲಿ ಭಾನುವಾರ ಬಾಂಬ್ ಸ್ಫೋಟ ಸಂಭವಿಸಿದೆ.
ಇದನ್ನೂ ಓದಿ:ಶ್ರೀಲಂಕಾದಲ್ಲಿ ಮತ್ತೊಂದು ಬಾಂಬ್ ಸ್ಫೋಟ: 2 ಸಾವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.