ADVERTISEMENT

ಕೀರ್ ಸ್ಟಾರ್ಮರ್‌ ಬ್ರಿಟನ್ ಪ್ರಧಾನಿ: ದೊರೆ ಚಾರ್ಲ್ಸ್ ಭೇಟಿ ಬಳಿಕ ಅಧಿಕೃತ ಘೋಷಣೆ

ಪಿಟಿಐ
Published 5 ಜುಲೈ 2024, 13:02 IST
Last Updated 5 ಜುಲೈ 2024, 13:02 IST
<div class="paragraphs"><p>ದೊರೆ ಚಾರ್ಲ್ಸ್‌ರೊಂದಿಗೆ ಕೀರ್</p></div>

ದೊರೆ ಚಾರ್ಲ್ಸ್‌ರೊಂದಿಗೆ ಕೀರ್

   

– ರಾಯಿಟರ್ಸ್ ಚಿತ್ರ

ಲಂಡನ್‌: ಲೇಬರ್ ಪಕ್ಷ ಚುನಾವಣೆ ಗೆದ್ದ ಬೆನ್ನಲ್ಲೇ, ಕೀರ್ ಸ್ಟಾರ್ಮರ್‌ ಅವರು ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ದೊರೆ ಮೂರನೇ ಚಾರ್ಲ್ಸ್‌ ಅವರನ್ನು ಭೇಟಿ ಮಾಡಿದ್ದಾರೆ. ಆ ಮೂಲಕ ಅಧಿಕೃತವಾಗಿ ಬ್ರಿಟನ್‌ನ ಪ್ರಧಾನಿಯಾಗಿದ್ದಾರೆ.

ADVERTISEMENT

61 ವರ್ಷದ ಕೀರ್ ಅವರು ತಮ್ಮ ಪತ್ನಿ ವಿಕ್ಟೋರಿಯಾ ಸ್ಟಾರ್ಮರ್ ಅವರೊಂದಿಗೆ ಅರಮನೆಗೆ ಬಂದು ದೊರೆಯನ್ನು ಭೇಟಿ ಮಾಡಿದರು.

ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ 650 ಕ್ಷೇತ್ರಗಳ ಪೈಕಿ 420ಕ್ಕೂ ಅಧಿಕ ಸ್ಥಾನಗಳನ್ನು ಲೇಬರ್ ಪಕ್ಷ ಗೆದ್ದಿದೆ. ‘ ಭಾರಿ ಜವಾಬ್ದಾರಿಯೊಂದಿಗೆ ಈ ರೀತಿಯ ಜನಾದೇಶ ಬಂದಿದೆ. ಬದಲಾವಣೆ ಆರಂಭವಾಗಿದೆ’ ಎಂದು ಕೀರ್‌ ಹೇಳಿದ್ದಾರೆ.

ಇದಕ್ಕೂ ಮುನ್ನ ರಿಷಿ ಸುನಕ್ ಅವರು, ದೊರೆಯನ್ನು ಭೇಟಿಯಾಗಿ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.