ADVERTISEMENT

ಕೆನ್ಯಾ: ಯೇಸುವನ್ನು ಸಂಧಿಸಲು ಸಾಯುವ ತನಕ ಉಪವಾಸ ವ್ರತಾಚರಣೆ– 400 ದಾಟಿದ ಸಾವಿನ ಸಂಖ್ಯೆ

ಕರಾವಳಿ ಕೆನ್ಯಾದ ಮಲಿಂದಿ ಪಟ್ಟಣ ಬಳಿಯ ಶಕಹೋಲ ಅರಣ್ಯದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 16:05 IST
Last Updated 18 ಜುಲೈ 2023, 16:05 IST
ಯೇಸು
ಯೇಸು   ಸಾಂದರ್ಭಿಕ ಚಿತ್ರ

ನೈರೋಬಿ: ಯೇಸುವನ್ನು ಸಂಧಿಸಲು ಸಾಯುವ ತನಕ ಉಪವಾಸ ವ್ರತಾಚರಣೆ (ಕೆನ್ಯಾದ ಡೂಮ್ಸ್‌ಡೇ ಆರಾಧನೆ) ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ; ಪತ್ತೇದಾರರು ಸೋಮವಾರ 12 ಮೃತದೇಹಗಳನ್ನು ಹೊರತೆಗೆದಿದ್ದು, ಇದರಿಂದ ಮೃತಪಟ್ಟವರ ಸಂಖ್ಯೆ 400 ದಾಟಿದೆ.

ಕರಾವಳಿ ಕೆನ್ಯಾದ ಮಲಿಂದಿ ಪಟ್ಟಣ ಬಳಿಯ ಶಕಹೋಲ ಅರಣ್ಯದಲ್ಲಿ ನೆಲೆಸಿರುವ ಪಂಥದೊಂದಿಗೆ ನಂಟು ಹೊಂದಿದ್ದ ಧಾರ್ಮಿಕ ನಾಯಕ ಪೌಲ್‌ ಮ್ಯಾಂಕೆಝಿ, ತನ್ನ ಅನುಯಾಯಿಗಳಿಗೆ ಈ ಆರಾಧನೆ ನಡೆಸುವಂತೆ ಉಪದೇಶಿಸಿದ್ದರು.

ಕಠೋರ ವ್ರತಾಚರಣೆಯಿಂದ ಹಲವರು ಮೃತಪಟ್ಟಿದ್ದು ಗೊತ್ತಾಗುತ್ತಿದ್ದಂತೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೌಲ್‌ ಮತ್ತು 36 ಶಂಕಿತರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಇನ್ನಷ್ಟೇ ಇವರೆಲ್ಲರ ವಿರುದ್ಧ ದೋಷಾರೋಪ ಹೊರಿಸಬೇಕಿದೆ.

ADVERTISEMENT

‘ಮೃತಪಟ್ಟವರ ಸಂಖ್ಯೆ 403ಕ್ಕೇರಿದ್ದು, 95 ಜನರನ್ನು ರಕ್ಷಿಸಲಾಗಿದೆ’ ಎಂದು ಕರಾವಳಿ ಪ್ರಾದೇಶಿಕ ಆಯುಕ್ತ ರೋಡಾ ಒನ್ಯಾಂಚ ಹೇಳಿದ್ದಾರೆ.

ಮಲಿಂದಿ ಪಟ್ಟಣದಲ್ಲಿ ಬೀಡುಬಿಟ್ಟಿರುವ ಕೆನ್ಯಾ ರೆಡ್‌ಕ್ರಾಸ್‌ ಅಧಿಕಾರಿಗಳಿಗೆ 613 ಜನರು ನಾಪತ್ತೆಯಾಗಿರುವ ವರದಿ ದಾಖಲಾಗಿದೆ. ಪತ್ತೆದಾರರು ಸಾಮೂಹಿಕ ಸಮಾಧಿಗಳನ್ನು ಈಗಲೂ ಹುಡುಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.