ನೈರೋಬಿ: ಇಲ್ಲಿನ ಪ್ರಮುಖ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಭಾರತದ ಅದಾನಿ ಸಮೂಹಕ್ಕೆ ವರ್ಗಾಯಿಸುವ ಪ್ರಕ್ರಿಯೆಗೆ ಕೀನ್ಯಾದ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದು 'ಫೈನಾನ್ಷಿಯಲ್ ಟೈಮ್ಸ್' ವರದಿ ಮಾಡಿದೆ.
ಪೂರ್ವ ಆಫ್ರಿಕಾದ ಅತಿದೊಡ್ಡ ವಿಮಾನಯಾನ ಕೇಂದ್ರವಾದ ಜೊಮೊ ಕೀನ್ಯಾಟ್ಟ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹಕ್ಕೆ 30 ವರ್ಷಗಳ ಗುತ್ತಿಗೆ ನೀಡುವ ಪ್ರಸ್ತಾಪಕ್ಕೆ ಕೀನ್ಯಾದ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದು ವರದಿಯು ತಿಳಿಸಿದೆ.
ಆದರೆ ಈ ಕುರಿತು ಆದಾನಿ ಸಮೂಹದಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಕೀನ್ಯಾದ ಪ್ರಮುಖ ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ ನೀಡುವ ಪ್ರಸ್ತಾವಿತ ಒಪ್ಪಂದವನ್ನು ವಿರೋಧಿಸಿ ಕೀನ್ಯಾದ ವಿಮಾನಯಾನ ಕಾರ್ಮಿಕರ ಒಕ್ಕೂಟವು ಕಳೆದ ತಿಂಗಳು ಮುಷ್ಕರಕ್ಕೆ ಕರೆ ನೀಡಿತ್ತು. ಇದರಿಂದ ಉದ್ಯೋಗ ಕಡಿತ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.