ADVERTISEMENT

ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಂತೆ ಜೈಶಂಕರ್‌ಗೆ ಕೇರಳ ಸಿಎಂ ಪಿಣರಾಯಿ ಮನವಿ

ಪಿಟಿಐ
Published 10 ಅಕ್ಟೋಬರ್ 2023, 7:07 IST
Last Updated 10 ಅಕ್ಟೋಬರ್ 2023, 7:07 IST
<div class="paragraphs"><p>ಪ್ಯಾಲೆಸ್ಟೀನ್‌ ಮೇಲೆ ಇಸ್ರೇಲ್ ಯೋಧರು ನಡೆಸಿದ ದಾಳಿಯಲ್ಲಿ ಧ್ವಂಸವಾದ ಮನೆಯ ಮುಂದೆ ಆತಂಕದಲ್ಲಿ ಕುಳಿತ ನಿವಾಸಿಗಳು</p></div>

ಪ್ಯಾಲೆಸ್ಟೀನ್‌ ಮೇಲೆ ಇಸ್ರೇಲ್ ಯೋಧರು ನಡೆಸಿದ ದಾಳಿಯಲ್ಲಿ ಧ್ವಂಸವಾದ ಮನೆಯ ಮುಂದೆ ಆತಂಕದಲ್ಲಿ ಕುಳಿತ ನಿವಾಸಿಗಳು

   

ರಾಯಿಟರ್ಸ್ ಚಿತ್ರ

ತಿರುವನಂತಪುರಂ: ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಯುದ್ಧ ಮುಂದುವರಿದಿದ್ದು, ಇದರಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಆಗ್ರಹಿಸಿದ್ದಾರೆ.

ADVERTISEMENT

ಉದ್ಯೋಗ ಅರಸಿ ಕೇರಳದಿಂದ ಇಸ್ರೇಲ್‌ಗೆ ಸುಮಾರು ಏಳು ಸಾವಿರ ಮಂದಿ ತೆರಳಿದ್ದಾರೆ. ಅವರು ಹಾಗೂ ಅವರ ಕುಟುಂಬದವರು ತೀವ್ರ ಆತಂಕದಲ್ಲಿದ್ದಾರೆ. ಅವರೊಂದಿಗೆ ಇಸ್ರೇಲ್‌ನಲ್ಲಿರುವ ಭಾರತೀಯರು ಸುರಕ್ಷಿತವಾಗಿ ಮರಳುವಂತೆ ಕ್ರಮ ವಹಿಸುವುದು ಅಗತ್ಯ ಎಂದು ವಿಜಯನ್ ಹೇಳಿದ್ದಾರೆ.

‘ಇಸ್ರೇಲ್‌ನಿಂದ ಭಾರತೀಯರನ್ನು ಕರೆತರುವ ವಿಷಯದಲ್ಲಿ ತಾವು ಮಧ್ಯ ಪ್ರವೇಶಿಸಬೇಕು. ಎಲ್ಲಾ ಭಾರತೀಯರು ಸುರಕ್ಷಿತವಾಗಿ ಮರಳಲು ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು’ ಎಂದು ಅವರು ಕೋರಿದ್ದಾರೆ.

ಇಸ್ರೇಲ್‌ ಮೇಲಿನ ಹಮಾಸ್ ಬಂಡುಕೋರರ ದಾಳಿಯಲ್ಲಿ 1,600 ಜನ ಮೃತಪಟ್ಟಿದ್ದಾರೆ ಎಂದೆನ್ನಲಾಗಿದೆ. ಬಂಡುಕೋರರ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಶುಶ್ರೂಷಕಿಯೊಬ್ಬರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.