ವಾಷಿಂಗ್ಟನ್: ಉದ್ಯೋಗ ಆಧಾರಿತ ವಲಸೆ ವೀಸಾದ ಮೇಲೆ ಅಮೆರಿಕಕ್ಕೆ ಬರುವವರಿಗೆ ನೀಡುವ ಗ್ರೀನ್‌ಕಾರ್ಡ್‌ಗೆ ಸಂಬಂಧಿಸಿದ ದೇಶವಾರು ಮಿತಿಯನ್ನು ತೆಗೆದುಹಾಕುವ ಮಸೂದೆಗೆ ಸಂಸದೀಯ ಸಮಿತಿ ಅಂಗೀಕಾರ ನೀಡಿದೆ.
ಕುಟುಂಬ ಆಧಾರಿತ ವಲಸೆ ವೀಸಾ ಹೊಂದಿದವರಿಗೆ ನೀಡಲಾಗುವ ಗ್ರೀನ್‌ಕಾರ್ಡ್‌ಗೆ ಸಂಬಂಧಿಸಿದ ದೇಶವಾರು ಮಿತಿಯನ್ನು ಶೇ 7ರಿಂದ ಶೇ 15ಕ್ಕೆ ಹೆಚ್ಚಿಸಲು ಸಹ ಈ ಸಮಿತಿ ಅಂಗೀಕಾರ ನೀಡಿದೆ.
ಇದು ಕಾಯ್ದೆ ರೂಪದಲ್ಲಿ ಜಾರಿಗೊಂಡರೆ, ಉದ್ಯೋಗ ಅರಸಿ ಅಮೆರಿಕ್ಕೆ ಬರುವ ಭಾರತ ಹಾಗೂ ಚೀನಾದವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.