ADVERTISEMENT

ಇಟಲಿ: ಮಹಾತ್ಮ ಗಾಂಧಿ ಪ್ರತಿಮೆ ಭಗ್ನಗೊಳಿಸಿದ ಖಾಲಿಸ್ತಾನಿಗಳು

ಪಿಟಿಐ
Published 12 ಜೂನ್ 2024, 19:49 IST
Last Updated 12 ಜೂನ್ 2024, 19:49 IST
<div class="paragraphs"><p>ಗಾಂಧಿ</p></div>

ಗಾಂಧಿ

   

ನವದೆಹಲಿ: ಶಂಕಿತ ಖಾಲಿಸ್ತಾನಿ ಸಿಖ್ ಕಾರ್ಯಕರ್ತರು ಇಟಲಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. 

ಜಿ–5 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಯುರೋಪ್ ರಾಷ್ಟ್ರಕ್ಕೆ ಭೇಟಿ ನೀಡಬೇಕಿರುವ ಕೆಲವೇ ದಿನಗಳ ಮುಂಚಿತವಾಗಿ ಈ ಘಟನೆ ನಡೆದಿದೆ. 

ADVERTISEMENT

ಈ ಘಟನೆ ಕುರಿತು ಭಾರತ ಸರ್ಕಾರವು ರೋಮ್ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದೆ. ಇದರಿಂದ ಎಚ್ಚೆತ್ತಿರುವ ಅಲ್ಲಿನ ಸ್ಥಳೀಯ ಸರ್ಕಾರವು, ಗಾಂಧೀಜಿ ಪ್ರತಿಮೆಯನ್ನು ಸರಿಪಡಿಸುವ ಕೆಲಸ ಮಾಡುತ್ತಿದೆ. ಅಲ್ಲದೆ, ಪ್ರತಿಮೆ ಮೇಲೆ ಶಂಕಿತ ಖಾಲಿಸ್ತಾನಿ ಸಿಖ್ ಕಾರ್ಯಕರ್ತರು ಎರಚಿದ್ದಾರೆ ಎನ್ನಲಾದ ಪೇಂಟ್ ಅನ್ನು ಅಳಿಸಿಹಾಕಲಾಗಿದೆ. 

ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು ದುರದೃಷ್ಟಕರ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಬೇಸರ ವ್ಯಕ್ತಪಡಿಸಿದ್ದಾರೆ. 

ಈ ವಿಚಾರದ ಬಗ್ಗೆ ಇಟಲಿ ಸರ್ಕಾರ ಮತ್ತು ಸ್ಥಳೀಯ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕಾನೂನುರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕು
ವಾಣಿ ರಾವ್, ಭಾರತದ ರಾಯಭಾರಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.