ADVERTISEMENT

ಅಮೆರಿಕದಲ್ಲಿ ಭಾರತೀಯರ ಅಪಹರಣ: ಶಂಕಿತ ವಶಕ್ಕೆ

ಆಘಾತದಲ್ಲಿ ಸಿಖ್‌ ಕುಟುಂಬದವರು

ಪಿಟಿಐ
Published 5 ಅಕ್ಟೋಬರ್ 2022, 11:04 IST
Last Updated 5 ಅಕ್ಟೋಬರ್ 2022, 11:04 IST
ಅಮೆರಿಕದಲ್ಲಿ ನಾಪತ್ತೆಯಾದ ಭಾರತೀಯ ಮೂಲದ ಸಿಖ್‌ ಕುಟುಂಬವರು –ಪಿಟಿಐ ಚಿತ್ರ
ಅಮೆರಿಕದಲ್ಲಿ ನಾಪತ್ತೆಯಾದ ಭಾರತೀಯ ಮೂಲದ ಸಿಖ್‌ ಕುಟುಂಬವರು –ಪಿಟಿಐ ಚಿತ್ರ   

ಹೋಶಿಯಾರ್‌ಪುರ್‌ (ಪಂಜಾಬ್‌)/ಲಾಸ್ ಏಂಜಲೀಸ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಎಂಟು ತಿಂಗಳ ಮಗು ಸೇರಿ ಭಾರತೀಯ ಮೂಲದ ಸಿಖ್‌ ಕುಟುಂಬದ ನಾಲ್ವರನ್ನು ಅಪಹರಿಸಿರುವ ಪ್ರಕರಣ ಸಂಬಂಧ 48 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತನನ್ನು ಜೀಸಸ್ ಮ್ಯಾನ್ಯುಯೆಲ್ ಸಲ್ಗಾಡೊ ಎಂದು ಗುರುತಿಸಲಾಗಿದೆ. ಈತ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ,ನಾಪತ್ತೆಯಾದವರ ಸುಳಿವು ಇನ್ನೂ ಲಭ್ಯವಾಗಿಲ್ಲ.ಮಂಗಳವಾರ ಸಂತ್ರಸ್ತರೊಬ್ಬರ ಬ್ಯಾಂಕ್‌ ಎಟಿಎಂ ಕಾರ್ಡ್‌ ಬಳಕೆ ಮಾಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಅಪಹರಣ ವಿಷಯ ಅವರ ಸಂಬಂಧಿಕರನ್ನು ಆಘಾತಕ್ಕೆ ಒಳಪಡಿಸಿದೆ.ವಿಷಯ ತಿಳಿದು ಜಸ್ದೀಪ್ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ ಎಂದು ನೆರೆಹೊರೆಯವರಾದ ಚರಣ್‌ಜಿತ್‌ ಸಿಂಗ್‌ ಹೇಳಿದ್ದಾರೆ.

ಸೋಮವಾರ ಕ್ಯಾಲಿಫೋರ್ನಿಯಾದ ಮೆರ್ಸೆಡ್‌ ಕೌಟಿಯಲ್ಲಿ ಭಾರತೀಯ ಮೂಲದ ನಾಲ್ವರನ್ನು ಅಪಹರಿಸಲಾಗಿತ್ತು. 8 ತಿಂಗಳ ಮಗು ಆರೋಹಿ ಧೇರಿ, ಜಸ್ಲೀನ್‌ ಕೌರ್‌ (27), ಜಸ್ದೀಪ್‌ ಸಿಂಗ್‌ (36) ಮತ್ತು ಅಮನ್‌ದೀಪ್‌ ಸಿಂಗ್‌ (39) ಅಪಹರಣಕ್ಕೆ ಒಳಗಾದವರು ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.