ADVERTISEMENT

ಚೀನಾ | ಸೂಪರ್‌ಮಾರ್ಕೆಟ್‌ನಲ್ಲಿ ಚಾಕುವಿನಿಂದ ದಾಳಿ ನಡೆಸಿದ ವ್ಯಕ್ತಿ: ಮೂವರು ಸಾವು

ಪಿಟಿಐ
Published 1 ಅಕ್ಟೋಬರ್ 2024, 4:19 IST
Last Updated 1 ಅಕ್ಟೋಬರ್ 2024, 4:19 IST
<div class="paragraphs"><p>ಪ್ರಾತಿನಿಧಿನ ಚಿತ್ರ</p></div>

ಪ್ರಾತಿನಿಧಿನ ಚಿತ್ರ

   

ರಾಯಿಟರ್ಸ್‌ ಚಿತ್ರ

ಬೀಜಿಂಗ್‌: ಚೀನಾದ ಶಾಂಘೈ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ವ್ಯಕ್ತಿಯೊಬ್ಬ ಎದುರಿಗೆ ಸಿಕ್ಕವರ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು  15 ಮಂದಿ ಗಾಯಗೊಂಡಿದ್ದಾರೆ. 

ADVERTISEMENT

ಸೋಮವಾರ ಘಟನೆ ನಡೆದಿದೆ. ಇಂದು ಚೀನಾದ 75ನೇ ರಾಷ್ಟ್ರೀಯ ದಿನ ಆಚರಣೆ ಮಾಡಲಾಗುತ್ತಿದ್ದು ಒಂದು ದಿನ ಮೊದಲು ಈ ಕೃತ್ಯ ನಡೆದದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಚಾಕು ಇರಿದಾತನನ್ನು 37 ವರ್ಷದ ಲಿನ್‌ ಎಂದು ಗುರುತಿಸಲಾಗಿದೆ. ಸೂಪರ್‌ ಮಾರ್ಕೆಟ್‌ನಲ್ಲಿ ಆತ ಚಾಕು ಹಿಡಿದು ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಲಿನ್‌ ವೈಯಕ್ತಿಕ ಹಣಕಾಸಿನ ಸಮಸ್ಯೆಗೆ ಸಿಲುಕಿದ್ದ. ತನ್ನ ಕೋಪವನ್ನು ಹೊರಹಾಕಲು ಇತರರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎಂದು ಶಾಂಘೈ ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.