ಮೆಲ್ಬರ್ನ್ : ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡ ಭೀಕರ ಕಾಳ್ಗಿಚ್ಚು ಇಲ್ಲಿನ ಮುದ್ದಾದ ಸಸ್ತನಿ ಕೋಲಾಗಳ ಜೀವಕ್ಕೂ ಕುತ್ತು ತಂದಿದೆ. ಇದರಿಂದಾಗಿ ಇಲ್ಲಿನ ಸರ್ಕಾರ ಇವುಗಳನ್ನು ‘ಅಳಿವಿನಂಚಿನ ಜೀವಿಗಳು’ ಎಂದು ಘೋಷಿಸುವ ಸಾಧ್ಯತೆ ಇದೆ.ಕೋಲಾಗಳ ಶೇ 30 ರಷ್ಟು ಆವಾಸಸ್ಥಾನವನ್ನು ಬೆಂಕಿ ನಾಶ ಮಾಡಿದೆ.ಕೋಲಾಗಳಲ್ಲದೆ ಹಲವು ಅಪರೂಪದ ಪ್ರಾಣಿಗಳನ್ನೂ ಅಳವಿನಂಚಿಗೆ ತಂದಿದೆ.
ಸೆಪ್ಟೆಂಬರ್‌ನಿಂದ ವ್ಯಾಪಿಸಿದ ಬೆಂಕಿಯಿಂದ ತೊಂದರೆಗೊಳಗಾದ ಹಲವು ಸಮುದಾಯದ ಜನರ ಮಾನಸಿಕ ಆರೋಗ್ಯ ಸುಧಾರಣೆಗೂ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸಲು ಮುಂದಾಗಿದೆ.
ದೇಶದ ಇತಿಹಾಸದಲ್ಲೇ ಬಹುದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿಗೆ 26 ಜನರು ಬಲಿಯಾಗಿದ್ದಾರೆ. ಕೋಟ್ಯಂತರ ಹೆಕ್ಟೇರ್ ಕಾಡು ನಾಶವಾಗಿದೆ. 2 ಸಾವಿರ ಮನೆಗಳು ಸುಟ್ಟುಹೋಗಿವೆ.
ಕಾಳ್ಗಿಚ್ಚಿನಿಂದಾದ ಹಾನಿಯನ್ನು ಸರಿದೂಗಿಸಲು ಆಸ್ಟ್ರೇಲಿಯಾ ಸರ್ಕಾರ ತುರ್ತು ನಿಧಿಯೊಂದನ್ನು ಸ್ಥಾಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.