ವುಡ್‌ಸೈಡ್, ಕ್ಯಾಲಿಫೋರ್ನಿಯಾ:ಸಂಜ್ಞೆ ಭಾಷೆ ಮೂಲಕ ಸಂವಹನ ನಡೆಸುತ್ತಿದ್ದ ‘ಕೊಕೊ’ ಹೆಸರಿನ 46 ವರ್ಷದ ಗೊರಿಲ್ಲಾ ಮಂಗಳವಾರ ಇಲ್ಲಿ ಕೊನೆಯುಸಿರೆಳೆಯಿತು.
ಸ್ಯಾನ್ ಫ್ರಾನ್ಸಿಸ್ಕೋದ ಮೃಗಾಲಯದಲ್ಲಿ ಈ ಗೊರಿಲ್ಲಾ ಹುಟ್ಟಿತ್ತು. 1974ರಲ್ಲಿ ಸ್ಟಾನ್‌ಫೋರ್ಡ್ ವಿವಿಯ ಯೋಜನೆ ಅಡಿಯಲ್ಲಿ ಡಾ. ಫ್ರಾಂಕೈನ್ ಪ್ಯಾಟರ್‌ಸನ್ ಅವರು ಈ ಗೊರಿಲ್ಲಾಗೆ ಸಂಜ್ಞಾ ಭಾಷೆ ಕಲಿಸಿದ್ದರು.
ಇದರಿಂದ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದ ಲಕ್ಷಾಂತರ ಮಂದಿ ಜೊತೆಗೆಗೊರಿಲ್ಲಾ ಸಂವಹನ ನಡೆಸಿ ಅವರ ಹೃದಯ ಗೆದ್ದಿತ್ತು. ಕೊಕೊ ಗೊರಿಲ್ಲಾದ ಕುರಿತಂತೆ ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲಾಗಿದ್ದು, ನ್ಯಾಷನಲ್ ಜಿಯಾಗ್ರಫಿಯಲ್ಲಿ ಎರಡು ಬಾರಿ ಕಾರ್ಯಕ್ರಮ ಪ್ರಸಾರಗೊಂಡಿತ್ತು. 1978ರಲ್ಲಿ ಕನ್ನಡಿಯಲ್ಲಿ ತನ್ನನ್ನು ನೋಡಿಕೊಳ್ಳುತ್ತಿರುವ ದೃಶ್ಯವೂ ಸಾಕಷ್ಟು ಜನಪ್ರಿಯತೆ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.