ADVERTISEMENT

ಜಾಗತಿಕ ಆರ್ಥಿಕ ಹಿಂಜರಿತ ಭಾರತದ ಮೇಲೆ ಪರಿಣಾಮ ಬೀರಲಿದೆ: ಐಎಂಎಫ್ ಮುಖ್ಯಸ್ಥೆ

ಏಜೆನ್ಸೀಸ್
Published 9 ಅಕ್ಟೋಬರ್ 2019, 11:13 IST
Last Updated 9 ಅಕ್ಟೋಬರ್ 2019, 11:13 IST
   

ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತವುಂಟಾಗಿದ್ದು ಇದು ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಹೊಡೆತ ನೀಡಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ನೂತನ ಮುಖ್ಯಸ್ಥೆ ಕ್ರಿಸ್ಟಿಲಿನಾ ಜಿಯೊರ್ಜಿವಾ ಹೇಳಿದ್ದಾರೆ.

ಐಎಂಎಫ್- ವಿಶ್ವ ಬ್ಯಾಂಕ್ ಶರತ್ಕಾಲದ ಸಭೆ ಮುಂದಿನ ವಾರ ನಡೆಯಲಿದೆ.ಪ್ರಸಕ್ತ ವರ್ಷ ವಿಶ್ವದ ಅಭಿವೃದ್ಧಿ ಪ್ರಮಾಣ ನಿಧಾನವಾಗಲಿದ್ದು, ಜಗತ್ತಿನ ಶೇ.90ರಷ್ಟು ದೇಶಗಳು ನಿಧಾನಗತಿಯಲ್ಲಿ ಅಭಿವೃದ್ಧಿ ಹೊಂದಲಿದೆ.

2019- 2020ರಲ್ಲಿ ಅಭಿವೃದ್ಧಿ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿಯಲಿದೆ. ಅಮೆರಿಕ ಮತ್ತು ಜರ್ಮನಿಯಲ್ಲಿ ನಿರುದ್ಯೋಗ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ ಮತ್ತು ಬ್ರೆಜಿಲ್ ದೇಶಕ್ಕೆ ಈ ವರ್ಷ ಆರ್ಥಿಕ ಹಿಂಜರಿತದಿಂದ ಹೆಚ್ಚಿನ ಆಘಾತವುಂಟಾಗಲಿದೆ.

ADVERTISEMENT

ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಪ್ರಧಾನ ಕಾರಣ ವ್ಯಾಪಾರ ಸಂಘರ್ಷವಾಗಿದೆ. ವ್ಯಾಪಾರ ಸಂಘರ್ಷದಿಂದಾಗಿ 2020ರ ವೇಳೆಗೆ 70,000ಕೋಟಿ ಡಾಲರ್ ನಷ್ಟವುಂಟಾಗಲಿದೆ. ಇದು ಎಷ್ಟೆಂದರೆ ಸ್ವಿಜರ್‌ಲೆಂಡ್‌ನ ಆರ್ಥಿಕತೆಯ ಪ್ರಮಾಣದಷ್ಟಾಗಿದೆ ಎಂದು ಜಿಯೊರ್ಜಿವಾ ಹೇಳಿದ್ದಾರೆ.

ಭಾರತದಲ್ಲಿ ಆರ್ಥಿಕ ಹಿಂಜರಿತವುಂಟಾಗಿದ್ದು ಜೂನ್ ತಿಂಗಳಾಂತ್ಯದಲ್ಲಿ ಜಿಡಿಪಿ ದರ ಶೇ. 5ರಷ್ಟು ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.