ADVERTISEMENT

ಕುವೈತ್‌ ಅಗ್ನಿ ದುರಂತ: ಮೃತರ ಕುಟುಂಬಕ್ಕೆ ₹12 ಲಕ್ಷ ಪರಿಹಾರ

ಪಿಟಿಐ
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
<div class="paragraphs"><p>ಕುವೈತ್‌ ಅಗ್ನಿ ದುರಂತದಲ್ಲಿ ಸಾವಿಗೀಡಾದ ಕೇರಳದ ಆಕಾಶ್‌ ಶಶಿಧರನ್‌ ನಾಯರ್‌ ಮೃತದೇಹದ ಬಳಿ ಕುಟುಂಬಸ್ಥರು ರೋದಿಸುತ್ತಿರುವುದು</p></div>

ಕುವೈತ್‌ ಅಗ್ನಿ ದುರಂತದಲ್ಲಿ ಸಾವಿಗೀಡಾದ ಕೇರಳದ ಆಕಾಶ್‌ ಶಶಿಧರನ್‌ ನಾಯರ್‌ ಮೃತದೇಹದ ಬಳಿ ಕುಟುಂಬಸ್ಥರು ರೋದಿಸುತ್ತಿರುವುದು

   

ದುಬೈ/ಕುವೈತ್‌: ಕುವೈತ್‌ ಅಗ್ನಿ ದುರಂತದಲ್ಲಿ ಸಾವಿಗೀಡಾದ 46 ಭಾರತೀಯರು ಸೇರಿದಂತೆ ಒಟ್ಟು 50 ಜನರ ಕುಟುಂಬಗಳಿಗೆ ಸರ್ಕಾರವು ತಲಾ ₹12.50 ಲಕ್ಷ ಪರಿಹಾರ ನೀಡಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಜೂನ್‌ 12ರಂದು ಕುವೈತ್‌ನ ಮಂಗಾಫ್‌ ನಗರದಲ್ಲಿ 7ನೇ ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಬೃಹತ್ ಅಗ್ನಿ ಅವಘಡದಲ್ಲಿ 50 ಜನ ಸಾವಿಗೀಡಾಗಿದ್ದರು. 196 ವಲಸೆ ಕಾರ್ಮಿಕರು ವಾಸವಿದ್ದ ಈ ಕಟ್ಟಡದಲ್ಲಿ ಭಾರತೀಯರೇ ಹೆಚ್ಚಾಗಿ ನೆಲೆಸಿದ್ದರು. 

ADVERTISEMENT

ಅಗ್ನಿ ಅವಘಡದಲ್ಲಿ ಕೇರಳದ 23, ತಮಿಳುನಾಡಿನ 7 ಮತ್ತು ಕರ್ನಾಟಕದ ಒಬ್ಬರು ಸಾವಿಗೀಡಾಗಿದ್ದಾರೆ.

ಮೃತರ ಕುಟುಂಬಗಳಿಗೆ ಭಾರತ ಸರ್ಕಾರ ತಲಾ ₹2 ಲಕ್ಷ ಹಾಗೂ ತನ್ನ ರಾಜ್ಯದವರಿಗೆ ಕೇರಳ ಸರ್ಕಾರವು ತಲಾ ₹5 ಲಕ್ಷ ಪರಿಹಾರ ಘೋಷಿಸಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.