ದುಬೈ: ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದರೂ, ಅಪರೂಪದ ಪ್ರಕರಣದಲ್ಲಿ ಏಳು ಕೈದಿಗಳನ್ನು ಕುವೈತ್ ಬುಧವಾರ ಮರಣದಂಡನೆಗೆ ಗುರಿಪಡಿಸಿದೆ.
ಮರಣದಂಡನೆಗೆ ಗುರಿಯಾದವರೆಲ್ಲರೂ ಪೂರ್ವಯೋಜಿತ ಕೊಲೆ ಮತ್ತು ಇತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಕೆಯುಎನ್‌ಎ ವರದಿ ಮಾಡಿದೆ.
ಗಲ್ಲು ಶಿಕ್ಷೆಗೆ ಗುರಿಯಾದವರಲ್ಲಿ ಕುವೈತ್‌ನ ಮೂವರು ಪುರುಷರು, ಒಬ್ಬ ಮಹಿಳೆ, ಸಿರಿಯಾ ಮತ್ತು ಪಾಕಿಸ್ತಾನದ ತಲಾ ಒಬ್ಬ ಪುರುಷರು ಹಾಗೂ ಇಥಿಯೋಪಿಯಾದ ಒಬ್ಬ ಮಹಿಳೆ ಇದ್ದಾರೆ.
ಗಲ್ಲು ಶಿಕ್ಷೆಗೆ ಗುರಿಪಡಿಸುವ ಪ್ರಕ್ರಿಯೆಯನ್ನು ಕೇಂದ್ರ ಕಾರಾಗೃಹದಲ್ಲಿ ನಡೆಸಲಾಯಿತು ಎಂದು ಕುವೈತ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.