ಬೆಂಗಳೂರು: ಐಪಿಎಲ್‌ನ ಮಾಜಿ ಅಧ್ಯಕ್ಷ, ಭಾರತದಿಂದ ಪರಾರಿಯಾಗಿ ಸದ್ಯ ಲಂಡನ್‌ನಲ್ಲಿ ನೆಲೆಸಿರುವ ಲಲಿತ್ ಮೋದಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋವಿಡ್ ಹಾಗೂ ನ್ಯುಮೋನಿಯಾಗೆ ತುತ್ತಾಗಿರುವ ಅವರು ಜೀವರಕ್ಷಕ ಸಾಧನದ ಬೆಂಬಲದಲ್ಲಿದ್ದಾರೆ.
ಖುದ್ದು ಅವರೇ ತಮ್ಮ ಅನಾರೋಗ್ಯದ ಮಾಹಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.
ಎರಡು ವಾರದಲ್ಲಿ ಎರಡು ಬಾರಿ ಕೋವಿಡ್‌ಗೆ ತುತ್ತಾದೆ. ಆಸ್ಪತ್ರೆಗೆ ದಾಖಲಾಗದ ಬಳಿಕ ಗಂಭೀರ ನ್ಯುಮೋನಿಯಾ ಬಾಧಿಸಿರುವುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.
‘ಎರಡು ವಾರಗಳಲ್ಲಿ 2 ಬಾರಿ ಕೋವಿಡ್‌ಗೆ ತುತ್ತಾಗಿ 3 ವಾರಗಳ ಬಂಧನದ ಬಳಿಕ ಈಗ ಗಂಭೀರ ನ್ಯುಮೋನಿಯಾ ಜತೆಯಾಗಿದೆ. ಇಬ್ಬರು ವೈದ್ಯರ ಜತೆಗೆ ಕೊನೆಗೂ ಏರ್ ಆ್ಯಂಬುಲೆನ್ಸ್ ಮೂಲಕ ಬಂದಿಳಿದೆ. ಪ್ರಯಾಣ ಸುಖಕಾರವಾಗಿತ್ತು. ಆದರೆ ಈಗಲೂ 24/7 ಆಮ್ಲಜನಕದ ಬೆಂಬಲದೊಂದಿದೆ ಇದ್ದೇನೆ‘ ಎಂದು ಅವರು ಬರೆದುಕೊಂಡಿದ್ದಾರೆ.
ಮೆಕ್ಸಿಕೋದಲ್ಲಿ ಅವರು ಕೋವಿಡ್‌ಗೆ ತುತ್ತಾಗಿದ್ದು, ಅಲ್ಲಿಂದ ಲಂಡನ್‌ಗೆ ಏರ್ ಆ್ಯಂಬುಲೆನ್ಸ್ ಮೂಲಕ ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.