ಲಾಸ್ ತೆಜೆರಿಯಸ್: ಉತ್ತರ ಕೇಂದ್ರ ವೆನುಜುವೆಲಾದಲ್ಲಿ ಶನಿವಾರದಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಭೂಕುಸಿತದಿಂದ ಕನಿಷ್ಠ 22 ಜನ ಸಾವನ್ನಪ್ಪಿದ್ದು, 52 ಜನ ನಾಪತ್ತೆಯಾಗಿದ್ದಾರೆ.
ಲಾಸ್ ತೆಜೆರಿಯಸ್‌ನಲ್ಲಿ ನಗರದ ಅನೇಕ ಮನೆಗಳು ನಾಶಗೊಂಡಿದ್ದು, ಗೊತ್ತಿಲ್ಲದಷ್ಟು ಸಂಖ್ಯೆಯ ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಶಸ್ತ್ರ ಸೇನಾ ಪಡೆ ರಕ್ಷಣಾ ಕಾರ್ಯದಲ್ಲಿ ಮಗ್ನವಾಗಿದ್ದು ಡ್ರೋನ್ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ನಾಪತ್ತೆಯಾದವರನ್ನು ಪತ್ತೆಮಾಡಲು ಮತ್ತು ಆಹಾರ ಹಾಗೂ ಔಷಧ ಪೂರೈಸಲು ನಿರ್ಧರಿಸಿವೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.
ಅವಶೇಷಗಳಡಿ ಸಿಲುಕಿರುವವರನ್ನು ಜೀವಂತವಾಗಿ ಹೊರತರಲು ಸಾದ್ಯವಾದಷ್ಟು ಪ್ರಯತ್ನಿಸುತ್ತಿದ್ದೇವೆ. ಆದರೆ ಈಗಾಗಲೆ 2 ಡಜನ್ ಜನರು ಸಾವನ್ನಪ್ಪಿದ್ದಾರೆ. ಮಕ್ಕಳು, ಹೆಣ್ಣುಮಕ್ಕಳನ್ನು ಕಳೆದುಕೊಂಡಿದ್ದೇವೆ. ಇದೊಂದು ದುರಂತ’ ಎಂದು ವೆನುಜುವೆಲಾ ಉಪಾಧ್ಯಕ್ಷ ಡೆಲ್ಸಿ ರೊಡಿಗ್ರಸ್ ಹೇಳಿದ್ದಾರೆ.
ಶನಿವಾರ ಮಧ್ಯಾಹ್ನದಿಂದ ಆರಂಭಗೊಂಡ ಮಳೆ ರಾತ್ರಿವರೆಗೂ ಸುರಿದಿದೆ. ಪ್ರವಾಸ ಉಂಟಾಗಿದ್ದು ಮರಗಳು, ರಸ್ತೆಗಳು, ವಿದ್ಯುತ್ ಕಂಬಗಳು ಹಾಗೂ ಮನೆಗಳು ಕೊಚ್ಚಿಕೊಂಡು ಹೋಗಿವೆ. ಸ್ಯಾಂಟೋಸ್ ಮ್ಯುಚೆಲೆನ ನಗರದ ಸುಮಾರು 20 ಸಾವಿರ ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.