ADVERTISEMENT

ದ್ವೀಪರಾಷ್ಟ್ರ ಈಗ ಸುರಕ್ಷಿತ

ಭದ್ರತಾ ಪಡೆ ಅಧಿಕಾರಿಗಳಿಂದ ಘೋಷಣೆ

ಪಿಟಿಐ
Published 7 ಮೇ 2019, 19:40 IST
Last Updated 7 ಮೇ 2019, 19:40 IST
ಶ್ರೀಲಂಕಾ ನೌಕಾಪಡೆ ಸಿಬ್ಬಂದಿ, ಸೇಂಟ್ ಆಂಥೊನಿ ಚರ್ಚ್‌ನ ಮರುನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ –ಎಎಫ್‌ಪಿ ಚಿತ್ರ
ಶ್ರೀಲಂಕಾ ನೌಕಾಪಡೆ ಸಿಬ್ಬಂದಿ, ಸೇಂಟ್ ಆಂಥೊನಿ ಚರ್ಚ್‌ನ ಮರುನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ –ಎಎಫ್‌ಪಿ ಚಿತ್ರ   

ಕೊಲಂಬೊ: ಈಸ್ಟರ್ ಭಾನುವಾರದಂದು ನಡೆದ ಭೀಕರ ಆತ್ಮಾಹುತಿ ದಾಳಿಯಿಂದ ತತ್ತರಿಸಿದ್ದ ಶ್ರೀಲಂಕಾ ಈಗ ಸಹಜಸ್ಥಿತಿಯತ್ತ ಮರಳುತ್ತಿದ್ದು, ದೇಶ ಸುರಕ್ಷಿತವಾಗಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ಹೇಳಿದ್ದಾರೆ.

ಸಾರ್ವಜನಿಕರುವದಂತಿಗಳನ್ನು ನಂಬಬಾರದು ಎಂದುಪೊಲೀಸ್ ಮಹಾನಿರ್ದೇಶಕ ಚಂದನ ವಿಕ್ರಮರತ್ನೆ ಮನವಿ ಮಾಡಿದ್ದಾರೆ.

‘ದಾಳಿಗೆ ನೇರ ಹಾಗೂ ಪರೋಕ್ಷ ಸಂಬಂಧ ಹೊಂದಿದ್ದವರಲ್ಲಿ ಹಲವರನ್ನು ಬಂಧಿಸಲಾಗಿದೆ ಹಾಗೂ ಇನ್ನೂ ಕೆಲವರನ್ನು ಹತ್ಯೆ ಮಾಡಲಾಗಿದೆ’ ಎಂದು ಸೇನಾಪಡೆಯ ಮೂರೂ ವಿಭಾಗಗಳ ಕಮಾಂಡರ್ ಹಾಗೂ ಪೊಲೀಸ್ ಮುಖ್ಯಸ್ಥರು ಸೋಮವಾರ ರಾತ್ರಿ ನಡೆಸಿದಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ADVERTISEMENT

‘ಸ್ಥಳೀಯ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ನ್ಯಾಷನಲ್ ತೌಹೀದ್ ಜಮಾತ್‌ಗೆ (ಎನ್‌ಟಿಜೆ)ಸೇರಿದ್ದ ಎಲ್ಲಾ ಸ್ಫೋಟಕಗಳನ್ನು ಪತ್ತೆ ಮಾಡಲಾಗಿದೆ. ಸಂಘಟನೆ ಜತೆ ಸಂಬಂಧ ಹೊಂದಿದ್ದವರನ್ನು ಬಂಧಿಸಲಾಗಿದೆ. ಇಬ್ಬರು ಸ್ಫೋಟಕ ತಜ್ಞರು ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ’ ಎಂದು ವಿಕ್ರಮರತ್ನೆ ವಿವರಿಸಿದ್ದಾರೆ.

ಬಂಧಿತರ ಕುರಿತು ವಿಕ್ರಮರತ್ನೆ ವಿವರ ನೀಡಿಲ್ಲ. ಆದರೆ 9 ಮಹಿಳೆಯರ ಸಹಿತ 73 ಜನರನ್ನು ಬಂಧಿಸಲಾಗಿದೆಎಂದುಪೊಲೀಸ್ ವಕ್ತಾರ ರುವನ್ ಗುಣಶೇಖರ ಹೇಳಿದ್ದಾರೆ.

₹700 ಕೋಟಿ ಮೌಲ್ಯದ ಸ್ವತ್ತು ವಶ: ‘ಸಿಐಡಿ ಹಾಗೂ ಭಯೋತ್ಪಾದಕ ತನಿಖಾ ಇಲಾಖೆ (ಟಿಐಡಿ) ಅಧಿಕಾರಿ
ಗಳು ಬಂಧಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.ಎನ್‌ಟಿಜೆಗೆ ಸೇರಿದ ₹14 ಕೋಟಿಗೂ ಹೆಚ್ಚು ಹಣ ಹಾಗೂ ₹700 ಕೋಟಿ ಮೌಲ್ಯದ ಸ್ವತ್ತುಗಳನ್ನು ಪತ್ತೆ ಮಾಡಲಾಗಿದೆ’ ಎಂದುಗುಣಶೇಖರ ತಿಳಿಸಿದ್ದಾರೆ.

‘ದೇಶದ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಲೆ.ಜ. ಸೇನಾನಾಯಕೆ ತಿಳಿಸಿದ್ದಾರೆ. ಏ.21ರಂದು ನಡೆದಿದ್ದ ಆತ್ಮಾಹುತಿ ದಾಳಿಯಲ್ಲಿ ಒಟ್ಟು 257 ಮಂದಿ ಮೃತಪಟ್ಟಿದ್ದರು.

ಬಿಗಿ ಭದ್ರತೆಯಲ್ಲಿ ತೆರೆದ ಚರ್ಚ್

ದಾಳಿಗೆ ತುತ್ತಾಗಿ ಹಾನಿಯಾಗಿರುವಸೇಂಟ್ ಆಂಥೊನಿ ಚರ್ಚ್ ಅನ್ನು ಮಂಗಳವಾರ ಬಿಗಿ ಭದ್ರತೆ ನಡುವೆ ಭಾಗಶಃ ತೆರೆಯಲಾಯಿತು.

‘ಚರ್ಚ್‌ ಮರುನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ನಡುವೆಯೇ ಜನರಿಗೆ ಸೇಂಟ್ ಆಂಥೊನಿ ಪ್ರತಿಮೆ ಎದುರು ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು’ ಎಂದು ಕಾರ್ಡಿನಲ್ ಮಾಲ್ಕಂ ರಂಜಿತ್ ಅವರ ವಕ್ತಾರಪಾದ್ರಿ ಎಡ್ಮಂಡ್ ತಿಲಕರತ್ನೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.