ಕೊಲಂಬೊ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ನಿಧನಕ್ಕೆ ಶ್ರೀಲಂಕಾದ ರಾಜಕೀಯ ಧುರೀಣರು ಸಂತಾಪ ಸೂಚಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ, ಪ್ರಧಾನಿ ತನಿಲ್ ವಿಕ್ರಮಸಿಂಘೆ ಸಂತಾಪ ಸೂಚಿಸಿದ್ದಾರೆ.
‘ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಕರುಣಾನಿಧಿ ಅವರ ನಿಧನದಿಂದ ಬೇಸರವಾಗಿದೆ. ಕರುಣಾನಿಧಿ ನಿಧನದಿಂದ ದುಃಖತಪ್ತರಾಗಿರುವ ಅವರ ಕುಟುಂಬದವರು, ಅಭಿಮಾನಿಗಳ ಬಗ್ಗೆ ಸಹಾನುಭೂತಿಯಿದೆ’ ಎಂದು ಸಿರಿಸೇನಾ ಟ್ವೀಟ್ ಮಾಡಿದ್ದಾರೆ.
ಕರುಣಾನಿಧಿ ಅವರ ಪುತ್ರ ಸ್ಟಾಲಿನ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಸಂತಾಪ ಸೂಚಿಸಿದ್ದೇನೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.
‘ತಮಿಳು ಸಾಹಿತ್ಯ, ಸಿನಿಮಾ ಮತ್ತು ರಾಜಕೀಯಕ್ಕೆ ಕರುಣಾನಿಧಿ ಅವರ ಕೊಡುಗೆ ಸಾಟಿಯಿಲ್ಲದ್ದು. ಅವರ ನಿಧನಕ್ಕೆ ಕಂಬನಿಮಿಡಿಯುತ್ತಿರುವ ಲಕ್ಷಾಂತರ ಜನರಲ್ಲಿ ನಾನೂ ಒಬ್ಬ’ ಎಂದು ರಾಜಪಕ್ಸ ಟ್ವೀಟ್ ಮಾಡಿದ್ದಾರೆ.
ಶ್ರೀಲಂಕಾದಲ್ಲಿ ತಮಿಳರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಪ್ರಾಂತ್ಯದ ಮುಖ್ಯಮಂತ್ರಿ ಸಿ.ವಿ. ವಿಘ್ನೇಶ್ವರನ್ ಸಹ ಕರುಣಾನಿಧಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇನ್ನಷ್ಟು ಸುದ್ದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.