ಪನಾಮ ನಗರ: ಆರು ತಿಂಗಳ ಹಿಂದಷ್ಟೆ ರಾಜಕೀಯ ನಿವೃತ್ತಿ ಘೋಷಿಸಿದ್ದ ಹೋಸೆ ರೌಲ್ ಮುಲಿನೊ ಅವರು ಇದೀಗ ಆಶ್ಚರ್ಯಕರ ರೀತಿಯಲ್ಲಿ ಪನಾಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವೃತ್ತಿಯಲ್ಲಿ ವಕೀಲರಾದ 64 ವರ್ಷದ ಹೋಸೆ ಅವರು 2009ರಿಂದ 2014ರವರೆಗೆ ಅಂದಿನ ಅಧ್ಯಕ್ಷ ರಿಕಾರ್ಡೊ ಮಾರ್ಟಿನೆಲ್ಲಿ ಅವರ ಆಡಳಿತದಲ್ಲಿ ಭದ್ರತಾ ಸಚಿವರಾಗಿದ್ದರು.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ರಿಕಾರ್ಡೊ ಅವರು 10 ವರ್ಷಕ್ಕಿಂತ ಅಧಿಕ ಅವಧಿಯ ಜೈಲುಶಿಕ್ಷೆಗೆ ಗುರಿಯಾದರು. ಇದರಿಂದ ಅವರು ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.
ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯಾಗಿ ಹೋಸೆ ಚುನಾವಣೆಯಲ್ಲಿ ಸ್ಪರ್ಧಿಸಿ, ಶೇ 35ರಷ್ಟು ಮತಗಳೊಂದಿಗೆ ಭಾನುವಾರ ರಾತ್ರಿ ಪನಾಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
‘ನಾನು ಇದನ್ನು ಎಂದಿಗೂ ಊಹಿಸಿಯೇ ಇರಲಿಲ್ಲ’ ಎಂದು ಹೋಸೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.