ADVERTISEMENT

ಶ್ರೀಲಂಕಾದ ಸರಣಿ ದಾಳಿಯು ಸಿರಿಯಾ ಸೋಲಿನ ಪ್ರತೀಕಾರ: ಬಾಗ್ದಾದಿ 

ಐಸಿಸ್ ಸಂಘಟನೆ ಮುಖ್ಯಸ್ಥ ಅಬು ಬಕ್ರಾಲ್ ಬಾಗ್ದಾದಿ

ಏಜೆನ್ಸೀಸ್
Published 30 ಏಪ್ರಿಲ್ 2019, 8:51 IST
Last Updated 30 ಏಪ್ರಿಲ್ 2019, 8:51 IST
   

ನವದೆಹಲಿ: ಸಿರಿಯಾದ ಬಗ್ಘೂಸ್ ದಾಳಿಯ ಸೋಲಿನ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ಸರಣಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಐಸಿಸ್ ಉಗ್ರ ಸಂಘಟನೆ ಮುಖ್ಯಸ್ಥ ಅಬುಬಕರ್‌ ಅಲ್‌ ಬಾಗ್ದಾದಿ ವಿಡಿಯೊದಲ್ಲಿ ಹೇಳಿಕೊಂಡಿದ್ದಾನೆ.

ಐದು ವರ್ಷಗಳ ನಂತರ ಬಿಡುಗಡೆ ಮಾಡಿದ ಮೊದಲ ವಿಡಿಯೊ ಇದಾಗಿದೆ. ‌ಇದನ್ನು ಆಲ್ ಫರ್ಖಾನ್ ಮಾಧ್ಯಮ ಬಿಡುಗಡೆ ಮಾಡಿದೆ.

ಈ ಮೊದಲು ಬಾಗ್ದಾದಿ ಮೊಸಲ್ ಮಸೀದಿ ಧರ್ಮೋಪದೇಶದಲ್ಲಿ ಕಾಣಿಸಿಕೊಂಡಿದ್ದನು. 2015ರ ವಾಯುದಾಳಿಯಲ್ಲಿ ಬಾಗ್ದಾದಿ ಗಂಭೀರವಾಗಿ ಗಾಯಗೊಂಡಿದ್ದಾನೆಎಂದು ವರದಿ ಮಾಡಲಾಗಿತ್ತು. ಆದರೆ ಈಗ ಸಂಪೂರ್ಣವಾಗಿ ಗುಣಮುಖವಾಗಿದ್ದಾನೆ.

ADVERTISEMENT

ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ಸರಣಿ ಬಾಂಬ್ ದಾಳಿಯು ಸಿರಿಯಾ ಯುದ್ಧದ ಪ್ರತೀಕಾರ. ಬಗ್ಘೂಸ್ ದಾಳಿ ಇಲ್ಲಿಗೆ ಮುಕ್ತಾಯವಾಗಿದೆ. ಆದರೆ ಇದರ ಕ್ರೌರ್ಯ, ಭಯಾನಕತೆ ಇನ್ನೂ ಮುಂದುವರೆಯಲಿದೆ ಎಂಬ ಎಚ್ಚರಿಕೆ ನೀಡಿದ್ದಾನೆ.

ಇದರಲ್ಲಿ ಮಾತನಾಡಿರುವುದು ಬಾಗ್ದಾದಿಯೇ ಎಂದು ತಜ್ಞರ ತಂಡ ಖಚಿತ ಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.