ಪ್ಯಾರಿಸ್: ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಸಿ ನಡೆದ ವಿಶ್ವದ ಮೊದಲ ಮಹಾಯುದ್ಧ ಕೊನೆಗೊಂಡು ನ. 11ಕ್ಕೆ ನೂರು ವರ್ಷಗಳಾದವು. ಇದರ ಸ್ಮರಣಾರ್ಥ, ಕದನ ವಿರಾಮ ಘೋಷಿಸಿದ ಸ್ಥಳದಲ್ಲಿ ಯುದ್ಧಸ್ಮಾರಕ ಫಲಕವನ್ನು ಅನಾವರಣಗೊಳಿಸಲಾಯಿತು.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಹಾಗೂ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರು ಪೂರ್ವ ಫ್ರಾನ್ಸ್‌ನಲ್ಲಿ ಫಲಕವನ್ನು ಅನಾವರಣಗೊಳಿಸಿದರು. 1914ರಿಂದ ಪ್ರಾರಂಭವಾಗಿದ್ದ ಈ ಸಮರ, 1918ರ ನ. 11ಕ್ಕೆ ಮುಕ್ತಾಯಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.