ಡೆರ್ನಾ,ಲಿಬಿಯಾ (ಎ.ಪಿ): ‘ಡೇನಿಯಲ್’ ಚಂಡಮಾರುತ ಹಾಗೂ ಆ ನಂತರ ಸುರಿದಿದ್ದ ಧಾರಾಕಾರ ಮಳೆ, ಪ್ರವಾಹದ ಪರಿಣಾಮ ಲಿಬಿಯಾದಲ್ಲಿ ಮೃತಪಟ್ಟವರ ಸಂಖ್ಯೆ 11 ಸಾವಿರದ ಗಡಿ ದಾಟಿದೆ. ಇನ್ನೂ 10 ಸಾವಿರ ಜನರು ನಾಪತ್ತೆಯಾಗಿದ್ದಾರೆ.
ಡೆರ್ನಾ ನಗರ ಸೇರಿದಂತೆ ತೀವ್ರ ಬಾಧಿತವಾಗಿರುವ ಪ್ರದೇಶಗಳಲ್ಲಿ ಲಿಬಿಯಾ ಆಡಳಿತವು ಶೋಧ ಕಾರ್ಯವನ್ನು ಚುರುಕುಗೊಳಿಸಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದು, ಸಾವಿನ ಸಂಖ್ಯೆ ಏರಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರವಾಹದಿಂದಾಗಿ ಎರಡು ಜಲಾಶಯಗಳು ಹಾನಿಗೊಂಡಿದೆ. ಹೆಚ್ಚುವರಿ ನೀರು ಏಕಾಏಕಿ ಡೆರ್ನಾ ನಗರದತ್ತ ಹರಿದಿದ್ದರಿಂದಾಗಿ ಹಾನಿ ಪ್ರಮಾಣ ಏರಿದೆ. ಹಲವರ ಶವಗಳು ಮಣ್ಣಿನೊಳಗೆ ಸಿಲುಕಿರುವ ಅಥವಾ ಸಮುದ್ರದ ಪಾಲಾಗಿರುವ ಶಂಕೆ ಇದೆ. ಶವಗಳ ಪತ್ತೆಗೆ ನುರಿತ ಈಜುಗಾರ ನೆರವನ್ನೂ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.