ADVERTISEMENT

ಡೇನಿಯಲ್‌ ಚಂಡಮಾರುತ ಅಬ್ಬರ: ಪೂರ್ವ ಲಿಬಿಯಾದಲ್ಲಿ 2 ಸಾವಿರ ಜನರ ಸಾವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2023, 16:28 IST
Last Updated 11 ಸೆಪ್ಟೆಂಬರ್ 2023, 16:28 IST
   

ಕೈರೊ : ಉತ್ತರ ಆಫ್ರಿಕಾ ರಾಷ್ಟ್ರ ಲಿಬಿಯಾದ ಪೂರ್ವ ಭಾಗದಲ್ಲಿ ವಾರಾಂತ್ಯದಲ್ಲಿ ಅಬ್ಬರಿಸಿದ ಡೇನಿಯಲ್‌ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಸಾವಿರಾರು ಮಂದಿ ಕಣ್ಮರೆಯಾಗಿದ್ದಾರೆ ಎಂದು ಪೂರ್ವ ಲಿಬಿಯಾ ಸರ್ಕಾರದ ಪ್ರಧಾನಿ ಒಸಾಮಾ ಹಮದ್‌ ಸೋಮವಾರ ಹೇಳಿದ್ದಾರೆ.

ದೇಶದಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದು, ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟಕ್ಕೆ ಇಳಿಸಲು ಅವರು ಆದೇಶಿಸಿದರು.

‘ಅಲ್‌ ಮಸರ್‌ ಟೆಲಿವಿಷನ್‌’ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಒಸಾಮಾ ಹಮದ್‌ ಅವರು, ಮೆಡಿಟರೇನಿಯನ್‌ನಿಂದ ಡೇನಿಯಲ್‌ ಚಂಡಮಾರುತ ದೇಶಕ್ಕೆ ಅಪ್ಪಳಿಸಿದ ನಂತರ ವಿಪತ್ತು ವಲಯವೆಂದು ಘೋಷಿಸಲಾದ ಡರ್ನಾದಲ್ಲಿ ಪ್ರವಾಹವು ನೆರೆಹೊರೆಯ ಪ್ರದೇಶಗಳನ್ನು ಸಂಪೂರ್ಣ ನಾಶಪಡಿಸಿದೆ. ಡರ್ನಾ ವಲಯದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಾವಿರಾರು ಜನರು ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ಚಂಡಮಾರುತದ ಮುನ್ನೆಚ್ಚರಿಕೆಯಾಗಿ ಶನಿವಾರವೇ ಶಾಲಾ, ಕಾಲೇಜು ತರಗತಿಗಳಿಗೆ ರಜೆ ನೀಡಲಾಗಿತ್ತು. ಪರಿಸ್ಥಿತಿ ನಿಭಾಯಿಸಲು ಪ್ರಧಾನಿಯು ತುರ್ತು ಪರಿ‌ಸ್ಥಿತಿ ಘೋಷಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.