ADVERTISEMENT

ಗಾಜಾದಲ್ಲಿ ಉಲ್ಬಣಿಸಿದ ಚರ್ಮರೋಗ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 13:01 IST
Last Updated 30 ಜುಲೈ 2024, 13:01 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಖಾನ ಯೂನಿಸ್ (ಗಾಜಾ, ಎಪಿ): ಕೇಂದ್ರ ಗಾಜಾದ ನಾಸೆರ್ ಆಸ್ಪತ್ರೆಯ ಚರ್ಮ ರೋಗಗಳ ವಿಭಾಗದಲ್ಲಿ ಚಿಂತಾಕ್ರಾಂತ ತಂದೆ–ತಾಯಿಯರು ದೊಡ್ಡ ಸಂಖ್ಯೆಯಲ್ಲಿ ಕಾಣುತ್ತಿದ್ದಾರೆ. 

ಗಾಜಾದಲ್ಲಿ ಚರ್ಮರೋಗಗಳು ವ್ಯಾಪಕವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ಪುಟ್ಟ ಮಕ್ಕಳನ್ನು ಅವು ಬಾಧಿಸುತ್ತಿವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

ನಿರಾಶ್ರಿತರಾದ ಪ್ಯಾಲೆಸ್ಟೈನಿಯನ್ನರು ಶಿಬಿರಗಳಲ್ಲಿ ಒಟ್ಟೊಟ್ಟಾಗಿ ಇರತೊಡಗಿದ ಮೇಲೆ ಈ ಸಮಸ್ಯೆಗಳು ವ್ಯಾಪಕವಾಗಿವೆ. ಪರಾವಲಂಬಿ ಜೀವಿಗಳ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ 1 ಲಕ್ಷದ 3 ಸಾವಿರಕ್ಕೂ ಹೆಚ್ಚು ಇದೆ. ದೇಹದ ವಿವಿಧೆಡೆ ಗುಳ್ಳೆಗಳು ವ್ಯಾಪಿಸುತ್ತಿರುವ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ 65 ಸಾವಿರಕ್ಕೂ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾಹಿತಿ ನೀಡಿದೆ. 

ಮರದ ಫ್ರೇಮುಗಳಿಗೆ ಸಿಕ್ಕಿಸಿದ ಪ್ಲಾಸ್ಟಿಕ್‌ ಶೀಟುಗಳು ಅಥವಾ ಬೆಟ್‌ಶೀಟುಗಳಿಂದ ನಿರಾಶ್ರಿತರಿಗೆ ಬಿಡಾರಗಳನ್ನು ರೂಪಿಸಲಾಗಿದೆ. ಅಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ಪ್ರಶ್ನೆಯೇ ಇಲ್ಲ. ಹೀಗಾಗಿ ಚರ್ಮರೋಗಗಳು ಅನೇಕರಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.