ಇಸ್ಲಾಮಾಬಾದ್: ಪಂಜಾಬ್ ಪ್ರಾಂತ್ಯದಲ್ಲಿ ಅಪಾರ ಪ್ರಮಾಣದ ಬೆಳೆಹಾನಿಗೆ ಕಾರಣವಾಗಿರುವ ಮರುಭೂಮಿ ಮಿಡತೆಗಳನ್ನು ನಾಶಪಡಿಸುವ ಸಲುವಾಗಿ ಪಾಕಿಸ್ತಾನದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ನಾಲ್ಕೂ ಪ್ರಾಂತ್ಯಗಳ (ಸಿಂಧ್, ಬಲೂಚಿಸ್ತಾನ್, ಖೈಬರ್ ಪಕ್ತುಂಕ್ವಾ, ಪಂಜಾಬ್) ಮಂತ್ರಿಗಳು, ಹಿರಿಯ ಅಧಿಕಾರಿಗಳೊಂದಿಗೆಶನಿವಾರ ನಡೆದ ಮಹತ್ವದ ಸಭೆ ಬಳಿಕ ಪ್ರಧಾನಿ ಇಮ್ರಾನ್ ಖಾನ್ ಈ ನಿರ್ಧಾರ ಕೈಗೊಂಡಿದ್ದಾರೆ.ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂರಾಷ್ಟ್ರೀಯ ಕ್ರಿಯಾ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆಎಂದು ಅಲ್ಲಿನ ಸುದ್ಧಿ ಮಾಧ್ಯಮ ಡಾನ್ ವರದಿ ಮಾಡಿದೆ.
ತೀವ್ರವಾಗಿ ವ್ಯಾಪಿಸಿರುವ ಸಮಸ್ಯೆಯನ್ನು ಪರಿಹರಿಸಲು ಸುಮಾರು ₹ 338 ಕೋಟಿ (730 ಕೋಟಿ ಪಾಕಿಸ್ತಾನಿ ರೂಪಾಯಿ) ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಮಿಡತೆ ಹಾವಳಿಯನ್ನು ನಿಯಂತ್ರಿಸಿ ಮತ್ತು ಬೆಳೆ ನಾಶವನ್ನು ತಪ್ಪಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ತುರ್ತಾಗಿ ಕೈಗೊಳ್ಳುವಂತೆ ಖಾನ್, ಅಧಿಕಾರಿಗಳಿಗೆ ತಿಳಿಸಿದ್ದಾರೆ.
2019ರ ಮಾರ್ಚ್‌ನಲ್ಲಿ ಮೊದಲ ಸಲ ಕಾಣಸಿಕೊಂಡಿದ್ದ ಮಿಡತೆ ಹಾವಳಿಸಿಂಧ್, ಬಲೂಚಿಸ್ತಾನ್, ಖೈಬರ್ ಪಕ್ತುಂಕ್ವಾ ಹಾಗೂ ದಕ್ಷಿಣ ಪಂಜಾಬ್ ಪ್ರಾಂತ್ಯದ ಸುಮಾರು 9 ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ವ್ಯಾಪಿಸಿತ್ತು. ಇದರಿಂದಾಗಿ ಸುಮಾರು ನೂರಾರು ಕೋಟಿ ಬೆಳೆ ಮತ್ತು ಮರಗಳೂ ಹಾನಿಗೊಳಗಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.