ಲಂಡನ್:ಅರವತ್ತು ವರ್ಷಗಳ ಹಿಂದೆ ಬಿಹಾರದ ನಳಂದ ವಸ್ತುಸಂಗ್ರಹಾಲಯದಿಂದ ಅಪಹರಿಸಿದ್ದ ಕಂಚಿನ ಬುದ್ಧನ ಪ್ರತಿಮೆಯನ್ನು ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ಬುಧವಾರ ಭಾರತಕ್ಕೆ ಮರಳಿಸಿದ್ದಾರೆ.
ಈ ಪ್ರತಿಮೆ 12ನೇ ಶತಮಾನದ್ದು.1961ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ)ಯಿಂದ ಅಪಹರಿಸಿದ್ದ ಹದಿನಾಲ್ಕು ಪ್ರತಿಮೆಗಳಲ್ಲಿ ಇದು ಒಂದು.
ಕಳೆದ ಮಾರ್ಚ್‌ನಲ್ಲಿ ಈ ಪ್ರತಿಮೆಯನ್ನು ವ್ಯಾಪಾರ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಈ ವೇಳೆ ಇದು ಭಾರತಕ್ಕೆ ಸೇರಿದ್ದು ಎಂದು ಕಲಾಕೃತಿಗಳ ಅಪರಾಧಗಳ ವಿರುದ್ಧ ಸಂಬಂಧಪಟ್ಟ ಸಂಸ್ಥೆ (ಎಆರ್‌ಸಿಎ)ಯ ಲಿಂಡಾ ಆಲ್ಬರ್ಟ್‌ಸನ್ ಮತ್ತು ಇಂಡಿಯಾ ಪ್ರೈಡ್ ಪ್ರಾಜೆಕ್ಟ್‌ನ ವಿಜಯ್‌ಕುಮಾರ್ ಅವರು ಗುರುತಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.